ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಆತಂಕದಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 12 ಪೈಸೆ ಕುಸಿತ ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಏರಿಕೆಯತ್ತ ಸಾಗಿದ್ದು, ಏಷ್ಯಾ ಶೇರುಪೇಟೆಗಳ ಕುಸಿತದಿಂದಾಗಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ. 12 ಪೈಸೆ ಕುಸಿತ ಕಂಡು 47.08 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಏಷ್ಯಾ ಶೇರುಪೇಟೆಗಳ ದುರ್ಬಲ ವಹಿವಾಟು ಹಾಗೂ ಬ್ಯಾಂಕ್ಗಳು ಹಾಗೂ ಅಮುದು ವಹಿವಾಟುದಾರರಿಂದ ಡಾಲರ್ ಖರೀದಿಯ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಪಾರೆಕ್ಸ್ ಡೀಲರ್ಗಳು ತಿಳಿಸಿದ್ದಾರೆ . |