ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಂಟಿಎನ್‌ಎಲ್: 300 ರೂಪಾಯಿಗಳಲ್ಲಿ ಪ್ರೀ ಪೇಡ್ 3ಜಿ ಸೇವೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂಟಿಎನ್‌ಎಲ್: 300 ರೂಪಾಯಿಗಳಲ್ಲಿ ಪ್ರೀ ಪೇಡ್ 3ಜಿ ಸೇವೆ
PTI
ಪ್ರೀಪೇಡ್ ಗ್ರಾಹಕರು 300 ರೂಪಾಯಿಗಳನ್ನು ಪಾವತಿಸಿ 3ಜಿ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಸರಕಾರಿ ಸ್ವಾಮ್ಯದ ಎಂಟಿಎನ್‌ಎಲ್ ಪ್ರಕಟಿಸಿದೆ .

ಪ್ರೀ ಪೇಡ್ 3ಜಿ ಸೇವೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ ಕಂಪೆನಿಯ ಮುಖ್ಯ ವ್ಯವಸ್ಥಾಪಕ ಆರ್‌.ಎಸ್.ಪಿ ಸಿನ್ಹಾ , ಗ್ರಾಹಕರು ಕಡಿಮೆ ದರದಲ್ಲಿ 3ಜಿ ಜಾದೂ ಪ್ರೀ ಪೇಡ್ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ .

ಹೆಚ್ಚಿನ ಗ್ರಾಹಕರು ಪ್ರೀ ಪೇಡ್ ಸೌಲಭ್ಯವನ್ನು ಬಯಸುತ್ತಿರುವುದರಿಂದ ಕೇವಲ 300 ರೂಪಾಯಿಗಳನ್ನು ಪಾವತಿಸಿದಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ದೊರೆಯಲಿದ್ದು, ಗ್ರಾಹಕರು ಸ್ಥಳೀಯ ವಿಡಿಯೋ ಕರೆಗಳನ್ನು ಪ್ರತಿ ನಿಮಿಷಕ್ಕೆ ಕೇವಲ 1.80 ರೂಪಾಯಿಗಳಾಗಲಿದ್ದು, ಡಟಾ ಡೌನ್‌ಲೋಡ್ ಮಾಡಿದಲ್ಲಿ ಪ್ರತಿ ಎಂಬಿಗೆ 3 ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ

ಪ್ರೀಪೇಡ್ 3ಜಿ ಸೇವೆಗಳನ್ನು ಆರಂಭಿಸಿರುವುದರಿಂದ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ತಾವು ನಿರೀಕ್ಷಿಸುವುದಾಗಿ ಸಿನ್ಹಾ ಹೇಳಿದ್ದಾರೆ .

ಎಂಟಿಎನ್‌ಎಲ್ ಕಂಪೆನಿ ಈಗಾಗಲೇ ದೆಹಲಿ ಹಾಗೂ ಮುಂಬೈನಲ್ಲಿ 3ಜಿ ಸೇವೆಗಳನ್ನು ಆರಂಭಿಸಿದ್ದು ,8 ಲಕ್ಷ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ ಎಂದು ಮುಖ್ಯ ವ್ಯವಸ್ಥಾಪಕ ಆರ್‌.ಎಸ್.ಪಿ ಸಿನ್ಹಾ ತಿಳಿಸಿದ್ದಾರೆ .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಿಟೇಲ್‌ ಕ್ಷೇತ್ರದಲ್ಲಿ ಎಫ್‌ಡಿಐ ಹೂಡಿಕೆಗೆ ನಕಾರ: ಶರ್ಮಾ
ಆರ್ಥಿಕ ಬಿಕ್ಕಟ್ಟಿನಿಂದ ಭಾರತ, ಚೀನಾಗೆ ಮುಕ್ತಿ: ಫೆಂಗ್‌ ಶೆನ್
ಒಂಬತ್ತು ಎಸ್‌ಇಝಗಳಿಗೆ ಸರಕಾರ ಅನುಮೋದನೆ
ಜವಳಿ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗಗಳ ಸೃಷ್ಟಿ: ಮಾರನ್
ಸಾಮ್‌ಸುಂಗ್‌ನಿಂದ ಪಿಕ್ಸಾನ್ 12 ಮಾಡೆಲ್ ಬಿಡುಗಡೆ
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ