ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಏಷ್ಯಾ ಶೇರುಪೇಟೆಗಳ ಚೇತರಿಕೆಯಿಂದಾಗಿ ದೇಶಿಯ ಶೇರುಪೇಟೆಯಲ್ಲಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ 18 ಪೈಸೆ ಏರಿಕೆ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 5 ಪೈಸೆ ಇಳಿಕೆ ಕಂಡು 47.01/02 ರೂಪಾಯಿಗಳಿಗೆ ಮುಕ್ತಾಯವಾಗಿತ್ತು . ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ 18 ಪೈಸೆ ಏರಿಕೆ ಕಂಡು ಕಳೆದ ಏಳು ತಿಂಗಳಲ್ಲಿ ಪ್ರಥಮ ಬಾರಿಗೆ 46.83 ರೂಪಾಯಿಗಳಿಗೆ ತಲುಪಿದೆ.

ಇತರ ಕರೆನ್ಸಿಗಳ ಎದುರು ಡಾಲರ್ ದುರ್ಬಲವಾಗಿದ್ದರಿಂದ ಏಷ್ಯಾ ಮಾರುಕಟ್ಟೆಗಳ ಚೇತರಿಕೆಯಿಂದಾಗಿ ರೂಪಾಯಿ ಮೌಲ್ಯ ಏರಿಕೆ ಕಂಡಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.

ಏತನ್ಮಧ್ಯೆ , ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಶೇ.2 ರಷ್ಟು ಏರಿಕೆ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಇಂಡಿಯಾ ವೇತನ ಹೆಚ್ಚಳ
ವಿತ್ತ ವಲಯ: ಕೇಂದ್ರ ಅನುಮತಿ
ಚಿನ್ನ : ಪ್ರತಿ 10 ಗ್ರಾಂಗೆ 15,030 ರೂಪಾಯಿ.
ಎಂಟಿಎನ್‌ಎಲ್: 300 ರೂಪಾಯಿಗಳಲ್ಲಿ ಪ್ರೀ ಪೇಡ್ 3ಜಿ ಸೇವೆ
ರಿಟೇಲ್‌ ಕ್ಷೇತ್ರದಲ್ಲಿ ಎಫ್‌ಡಿಐ ಹೂಡಿಕೆಗೆ ನಕಾರ: ಶರ್ಮಾ
ಆರ್ಥಿಕ ಬಿಕ್ಕಟ್ಟಿನಿಂದ ಭಾರತ, ಚೀನಾಗೆ ಮುಕ್ತಿ: ಫೆಂಗ್‌ ಶೆನ್