ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಗ್ರಾಂಗೆರ್ ನಿಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಗ್ರಾಂಗೆರ್ ನಿಧನ
ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಕ್ಲೈವ್ ಡಬ್ಲೂ ಜೆ ಗ್ರಾಂಗೆರ್ ಸಾನ್ ಡಿಯಾಗೊದಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂಗ್ಲೆಂಡ್ ನಿವಾಸಿಯಾಗಿದ್ದ 74 ವರ್ಷ ವಯಸ್ಸಿನ ಜಗತ್ತಿನ ಖ್ಯಾತ ಆರ್ಥಿಕ ತಜ್ಞ ಗ್ರಾಂಗೆರ್ ಸಾವನ್ನಪ್ಪಿದ್ದಾರೆ ಎಂದು ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಾನ್ ಡಿಯಾಗೊದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಂಗೆರ್ ವಿಶ್ರಾಂತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಗ್ರಾಂಗೆರ್ ಹಾಗೂ ಅವರ ಸಹದ್ಯೋಗಿ ರಾಬರ್ಟ್ ಎಂಗ್ಲೆ ' ಆರ್ಥಿಕ ಅಂಕಿ ಅಂಶಗಳು ' ಎನ್ನುವ ಪ್ರಬಂಧ ರಾಷ್ಟ್ರದ ಆದಾಯ ಹಾಗೂ ಹಣಕಾಸಿನ ವಿತರಣೆ ಕ್ಷೇತ್ರದಲ್ಲಿ ಹೊಸತೊಂದು ಬೆಳವಣಿಗೆ ತೋರಿದ ಹಿನ್ನೆಲೆಯಲ್ಲಿ ಸರಕಾರ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಿತ್ತು .

ಆರ್ಥಿಕ ಸಂಶೋಧಕರಿಗೆ ಹಾಗೂ ಹಣಕಾಸಿನ ಮಾರುಕಟ್ಟೆಯ ಆರ್ಥಿಕ ವಿಮರ್ಶಕರಿಗೆ ಗ್ರಾಂಗೆರ್ ಹಾಗೂ ಎಂಗ್ಲೆ ಮಂಡಿಸಿದ ಪ್ರಬಂಧ ದಾರಿದೀಪವಾಗಿದೆ ಎಂದು ರಾಯಲ್ ಸ್ವೀಡಿಷ್ ಎಕಾಡೆಮಿ ಆಫ್ ಸೈನ್ಸೆಸ್ಸ್ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಏರ್ ಇಂಡಿಯಾ ವೇತನ ಹೆಚ್ಚಳ
ವಿತ್ತ ವಲಯ: ಕೇಂದ್ರ ಅನುಮತಿ
ಚಿನ್ನ : ಪ್ರತಿ 10 ಗ್ರಾಂಗೆ 15,030 ರೂಪಾಯಿ.
ಎಂಟಿಎನ್‌ಎಲ್: 300 ರೂಪಾಯಿಗಳಲ್ಲಿ ಪ್ರೀ ಪೇಡ್ 3ಜಿ ಸೇವೆ
ರಿಟೇಲ್‌ ಕ್ಷೇತ್ರದಲ್ಲಿ ಎಫ್‌ಡಿಐ ಹೂಡಿಕೆಗೆ ನಕಾರ: ಶರ್ಮಾ