ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಎಂ ದಿವಾಳಿತನದಿಂದ ಭಾರತ,ಚೀನಾ ಕಂಪೆನಿಗಳಿಗೆ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಎಂ ದಿವಾಳಿತನದಿಂದ ಭಾರತ,ಚೀನಾ ಕಂಪೆನಿಗಳಿಗೆ ಲಾಭ
ಅಮೆರಿಕದ ಖ್ಯಾತ ವಾಹನೋದ್ಯಮ ಸಂಸ್ಥೆ ಜನರಲ್ ಮೋಟಾರ್ಸ್ ದಿವಾಳಿ ಘೋಷಿಸುವ ನಿರ್ಧಾರದಿಂದ ಭಾರತ ಮತ್ತು ಚೀನಾ ದೇಶಗಳ ವಾಹನ ಬಿಡಿಭಾಗಗಳ ತಯಾರಿಕೆ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಾಹನೋದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ .

ಜನರಲ್ ಮೋಟಾರ್ಸ್ ಸಂಸ್ಥೆ ಸರಕಾರದ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಪುನರ್‌ಪರಿಶೀಲಿಸುತ್ತಿದ್ದು, ಸಾಲ ತೀರಿಸಲಾಗದ ಸ್ಥಿತಿಯಲ್ಲಿದೆ ಎಂದು ವಾಹನ ಬಿಡಿಭಾಗಗಳ ತಯಾರಿಕೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ .

ಡೆಟ್ರಾಯಿಟ್ ಮೂಲದ ವಾಹನೋದ್ಯಮ ಕಂಪೆನಿಗಳಿಗೆ ಬಿಡಿಭಾಗಗಳನ್ನು ಸರಬರಜಾು ಮಾಡುವ ಸುಂದರಂ ಸಂಸ್ಥೆಯ ಹಣಕಾಸು ವಿಭಾಗದ ಅಧ್ಯಕ್ಷ ವಿ.ಜಿ.ಜಗನ್ನಾಥನ್ ಮಾತನಾಡಿ, ಜನರಲ್ ಮೋಟಾರ್ಸ್ ಅಸ್ತಿತ್ವ ನಾಶವಾಗುವುದಿಲ್ಲ. ಕಾರ್ಯಾಚರಣೆಯಲ್ಲಿ ಬದಲಾವಣೆಯನ್ನು ತರುತ್ತಿದೆ ಎಂದು ಹೇಳಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಅಮೆರಿಕ ಹಾಗೂ ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳ ವಾಹನೋದ್ಯಮ ಸಂಸ್ಥೆಗಳು ಭಾರಿ ನಷ್ಟ ಎದುರಿಸುತ್ತಿದ್ದು, ಮುಂಬರುವ ವರ್ಷದಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಗ್ರಾಂಗೆರ್ ನಿಧನ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಏರ್ ಇಂಡಿಯಾ ವೇತನ ಹೆಚ್ಚಳ
ವಿತ್ತ ವಲಯ: ಕೇಂದ್ರ ಅನುಮತಿ
ಚಿನ್ನ : ಪ್ರತಿ 10 ಗ್ರಾಂಗೆ 15,030 ರೂಪಾಯಿ.
ಎಂಟಿಎನ್‌ಎಲ್: 300 ರೂಪಾಯಿಗಳಲ್ಲಿ ಪ್ರೀ ಪೇಡ್ 3ಜಿ ಸೇವೆ