ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಿಎಚ್‌ಇಎಲ್‌ಗೆ ಒಮನ್‌ನಿಂದ 375 ಕೋಟಿ ಗುತ್ತಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಚ್‌ಇಎಲ್‌ಗೆ ಒಮನ್‌ನಿಂದ 375 ಕೋಟಿ ಗುತ್ತಿಗೆ
ಸರಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಒಮನ್ ಕಂಪೆನಿಯೊಂದಕ್ಕೆ ಅನಿಲ ಟರ್ಬೈನ್‌ಗಳನ್ನು ರಫ್ತು ಮಾಡಲು 375 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಬಿಎಚ್‌ಇಎಲ್ ಸಂಸ್ಥೆ 125 ಮೆಗಾ ವ್ಯಾಟ್‌ ವಿದ್ಯುತ್‌ನ್ನು ಉತ್ಪಾದಿಸುವ ತಲಾ ಎರಡು ಗ್ಯಾಸ್ ಟರ್ಬೈನ್‍‌ಗಳ ತಯಾರಿಕೆಗೆ ಅಹ್ವಾನಿಸಲಾದ ಬಿಡ್‌ನಲ್ಲಿ 375 ಕೋಟಿ ರೂಪಾಯಿಗಳ ರಫ್ತು ಟೆಂಡರ್ ಪಡೆದಿದೆ ಎಂದು ಒಮನ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಒಮನ್‌ನಲ್ಲಿರುವ ಪೆಟ್ರೋಲಿಯಂ ಡೆವಲೆಪ್‌ಮೆಂಟ್‌ನ ವಿದ್ಯುತ್ ಉತ್ಪಾದನೆ ಕೇಂದ್ರಕ್ಕೆ ಗ್ಯಾಸ್ ಟರ್ವೈನ್‌ಗಳ ಸರಬರಾಜು, ನಿರ್ಮಾಣ ಹಾಗೂ 125 ಮೆಗಾ ವ್ಯಾಟ್‌ ತಲಾ ಎರಡು ಗ್ಯಾಸ್ ಟರ್ವೈನ್‌ಗಳ ಕಾರ್ಯನಿರ್ವಹಣೆ ಸೇರಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಬಿಎಚ್‌ಇಎಲ್‌ನ ಹೈದ್ರಾಬಾದ್ ವಿಭಾಗ ಗ್ಯಾಸ್ ಟರ್ಬೈನ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಕೆ ಹಾಗೂ ಸರಬರಾಜು ವಹಿಸಲಾಗಿದ್ದು, ಬೆಂಗಳೂರಿನಲ್ಲಿರುವ ಬಿಎಚ್‌ಇಎಲ್ ಘಟಕ ಕಂಟ್ರೋಲ್ ಸಿಸ್ಟಮ್ ಉತ್ಪಾದನೆ ಮತ್ತು ಸರಬರಾಜು ಕಾರ್ಯವನ್ನು ವಹಿಸಿಕೊಂಡಿದೆ.

ಪ್ರಸಕ್ತ ಗುತ್ತಿಗೆಯಲ್ಲಿ ಬಿಎಚ್‌ಇಎಲ್ ಸಂಸ್ಥೆ ಒಮನ್‌ನಲ್ಲಿ 15 ಗ್ಯಾಸ್ ಟರ್ಬೈನ್‌ಗಳನ್ನು ಅಳವಡಿಸಲಿದೆ. ಕಳೆದ 14 ವರ್ಷಗಳಲ್ಲಿ 14 ಪ್ರಮುಖ ಗುತ್ತಿಗೆಗಳನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ ಖ್ಯಾತಿಗೆ ಬಿಎಚ್‌ಇಎಲ್ ಸಂಸ್ಥೆ ಪಾತ್ರವಾಗಿದೆ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಎಂ ದಿವಾಳಿತನದಿಂದ ಭಾರತ,ಚೀನಾ ಕಂಪೆನಿಗಳಿಗೆ ಲಾಭ
ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಗ್ರಾಂಗೆರ್ ನಿಧನ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಏರ್ ಇಂಡಿಯಾ ವೇತನ ಹೆಚ್ಚಳ
ವಿತ್ತ ವಲಯ: ಕೇಂದ್ರ ಅನುಮತಿ
ಚಿನ್ನ : ಪ್ರತಿ 10 ಗ್ರಾಂಗೆ 15,030 ರೂಪಾಯಿ.