ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಎಂ ದಿವಾಳಿ: ವಿಪ್ರೋ ಆದಾಯಕ್ಕೆ ಧಕ್ಕೆಯಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಎಂ ದಿವಾಳಿ: ವಿಪ್ರೋ ಆದಾಯಕ್ಕೆ ಧಕ್ಕೆಯಿಲ್ಲ
ಡೆಟ್ರಾಯಿಟ್ ಮೂಲದ ಗ್ರಾಹಕ ಕಂಪೆನಿಯಾದ ಜನರಲ್ ಮೋಟಾರ್ಸ್ ಕಾರ್ಪೋರೇಶನ್ ದಿವಾಳಿಯಾಗಿದ್ದರಿಂದ ಕಂಪೆನಿಯ ಆದಾಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪೆನಿಯಾದ ವಿಪ್ರೋ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಜನರಲ್ ಮೋಟಾರ್ಸ್‌ನಿಂದ ವಿಪ್ರೋ ಸಂಸ್ಥೆಗೆ ಕೇವಲ ಶೇ.1 ರಷ್ಟು ಮಾತ್ರ ಆದಾಯ ಬರುತ್ತಿದ್ದು, ಕಂಪೆನಿಯ ದಿವಾಳಿ ಘೋಷಿಸಿರುವುದರಿಂದ ವಿಪ್ರೋ ಆದಾಯದ ಮೇಲೆ ಪರಿಣಾಮವಾಗದು ಎಂದು ವಿಪ್ರೋ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕದ ವಾಹನೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಡೆಟ್ರಾಯಿಟ್ ಮೂಲದ ಜನರಲ್ ಮೋಟಾರ್ಸ್ ಕಂಪೆನಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ ದಿವಾಳಿ ಘೋಷಿಸಿ ಸರಕಾರಕ್ಕೆ ಪುನಶ್ಚೇತನಕ್ಕಾಗಿ ಸಹಾಯ ನೀಡುವಂತೆ ಮನವಿ ಮಾಡಿದೆ.

ವಿಪ್ರೋ ಸಂಸ್ಥೆ 2008-09ರ ಆರ್ಥಿಕ ಸಾಲಿನಲ್ಲಿ 38.99 ಬಿಲಿಯನ್ ರೂಪಾಯಿಗಳ ನಿವ್ವಳ ಲಾಭ ಘೋಷಿಸಿದ್ದು, ವರ್ಷದಿಂದ ವರ್ಷಕ್ಕೆ ಶೇ.19 ರಷ್ಟು ಏರಿಕೆ ಕಾಣುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಎಚ್‌ಇಎಲ್‌ಗೆ ಒಮನ್‌ನಿಂದ 375 ಕೋಟಿ ಗುತ್ತಿಗೆ
ಜಿಎಂ ದಿವಾಳಿತನದಿಂದ ಭಾರತ,ಚೀನಾ ಕಂಪೆನಿಗಳಿಗೆ ಲಾಭ
ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಗ್ರಾಂಗೆರ್ ನಿಧನ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಏರ್ ಇಂಡಿಯಾ ವೇತನ ಹೆಚ್ಚಳ
ವಿತ್ತ ವಲಯ: ಕೇಂದ್ರ ಅನುಮತಿ