ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂದು ರಫ್ತು ವಹಿವಾಟುದಾರರಿಂದ ವಾಣಿಜ್ಯ ಸಚಿವರ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದು ರಫ್ತು ವಹಿವಾಟುದಾರರಿಂದ ವಾಣಿಜ್ಯ ಸಚಿವರ ಭೇಟಿ
ಮುಂಬರುವ ಅಗಸ್ಟ್‌ನಲ್ಲಿ ಪ್ರಕಟಿಸಲಾಗುವ ನೂತನ ವಿದೇಶಿ ವ್ಯಾಪಾರ ನೀತಿ ಐದು ವರ್ಷಗಳ ಅವಧಿಗೆ ಜಾರಿಯಲ್ಲಿರುವುದರಿಂದ ರಫ್ತು ವಹಿವಾಟುದಾರರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ವ್ಯಾಪಾರ ನೀತಿಯಲ್ಲಿ ಅಗತ್ಯತೆಗಳು ಸರಕಾರದ ನೀತಿಗಳು ಅಮುದು ಮತ್ತು ರಫ್ತು ವಹಿವಾಟಿನ ನಿಯಮಗಳು ಒಳಗೊಂಡಿರುತ್ತವೆ ಎಂದು ರಫ್ತು ವಹಿವಾಟುದಾರರ ನಿಯೋಗ ತಿಳಿಸಿದೆ..

ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ರಾಜ್ಯ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಮತ್ತು ವಿದೇಶಿ ವ್ಯವಹಾರ ಇಲಾಖೆಯ ಮಹಾನಿರ್ದೇಶಕ ಆರ್‌.ಎಸ್ ಗುಜ್ರಾಲ್ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.

ವಿದೇಶಿ ವ್ಯಾಪಾರ ನೀತಿಗಳಿಂದ ಎದುರಾಗುವ ಸಮಸ್ಯೆಗಳ ಕುರಿತಂತೆ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗೈನೇಜೇಶನ್ ಪ್ರಧಾನ ನಿರ್ದೇಶಕ ಅಜಯ್ ಸಹಾಯ್ ತಿಳಿಸಿದ್ದಾರೆ.

ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗೈನೇಜೇಶನ್ ಅಧ್ಯಕ್ಷ ಶಕ್ತಿವೇಲು ಕೇಂದ್ರ ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿಯವರೊಂದಿಗೆ ಚರ್ಚಿಸಿದ್ದು, ಮುಂಬರುವ ಬಜೆಟ್‌ನಲ್ಲಿ ರಿಯಾಯತಿಗಳನ್ನು ಘೋಷಿಸುವಂತೆ ಒತ್ತಾಯಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಎಂ ದಿವಾಳಿ: ವಿಪ್ರೋ ಆದಾಯಕ್ಕೆ ಧಕ್ಕೆಯಿಲ್ಲ
ಬಿಎಚ್‌ಇಎಲ್‌ಗೆ ಒಮನ್‌ನಿಂದ 375 ಕೋಟಿ ಗುತ್ತಿಗೆ
ಜಿಎಂ ದಿವಾಳಿತನದಿಂದ ಭಾರತ,ಚೀನಾ ಕಂಪೆನಿಗಳಿಗೆ ಲಾಭ
ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಗ್ರಾಂಗೆರ್ ನಿಧನ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಏರ್ ಇಂಡಿಯಾ ವೇತನ ಹೆಚ್ಚಳ