ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತ, ಚೀನಾ ಬಲಾಢ್ಯ ಆರ್ಥಿಕ ರಾಷ್ಟ್ರಗಳಾಗಲಿವೆ:ಯುಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ, ಚೀನಾ ಬಲಾಢ್ಯ ಆರ್ಥಿಕ ರಾಷ್ಟ್ರಗಳಾಗಲಿವೆ:ಯುಎಸ್
ಜನರಲ್ ಮೋಟಾರ್ಸ್ ಕುಸಿತದ ನಂತರ ಅಮೆರಿಕದ ಜನತೆಗೆ ಆರ್ಥಿಕ ವಾಸ್ತವತೆಯ ಅರಿವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತ ಮತ್ತು ಚೀನಾ ದೇಶಗಳು ಬಲಾಢ್ಯ ಆರ್ಥಿಕ ರಾಷ್ಟ್ರಗಳಾಗಲಿವೆ ಎಂದು ಅಮೆರಿಕದ ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ.

ಅಮೆರಿಕನ್ನರು ವಾಸ್ತವತೆಯನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ . ಆದರೆ ಉದಯೋನ್ಮುಖ ಮಾರುಕಟ್ಟೆಗಳಾದ ಭಾರತ ಮತ್ತು ಚೀನಾ ದೇಶಗಳು ಶೀಘ್ರದಲ್ಲಿ ಸದೃಢ ಆರ್ಥಿಕ ಕೇಂದ್ರಗಳಾಗಲಿವೆ ಎಂದು ಸಿಎನ್‌ಎನ್‌ಮನಿ ಡಾಟ್ ಕಾಂ ಸಂಪಾದಕ ಪೌಲ್ ಆರ್. ಲಾ ಮೋನಿಕಾ ಹೇಳಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಉದಯೋನ್ಮುಖ ರಾಷ್ಟ್ರಗಳು ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳನ್ನು ಹಿಂದಿಕ್ಕಿ ಪ್ರಬಲ ಆರ್ಥಿಕ ರಾಷ್ಟ್ರಗಳಾಗಲಿವೆ ಎಂದು ಲಂಡನ್ ಮೂಲದ ಆರ್ಥಿಕ ಸಮೀಕ್ಷಾ ಸಂಸ್ಥೆ, ಸೆಂಟರ್ ಫಾರ್ ಎಕಾನಾಮಿಕ್ಸ್ ಆಂಡ್ ಬಿಜಿನೆಸ್ ರಿಸರ್ಚ್ ಭವಿಷ್ಯ ನುಡಿದಿದೆ.

ಆದರೆ ಅಮೆರಿಕದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ ಎಂದರ್ಥವಲ್ಲ. ವಾಸ್ತವವಾಗಿ ಆರ್ಥಿಕತೆ ಸುಸ್ಥಿತಿಗೆ ಬರುವಲ್ಲಿನ ವಿಳಂಬತೆಯಿಂದಾಗಿ ಭಾರತ, ಚೀನಾ ಲ್ಯಾಟಿನ್ ಅಮೆರಿಕ ಮತ್ತು ಇತರ ಉದಯೋನ್ಮುಖ ರಾಷ್ಟ್ರಗಳ ಮಾರುಕಟ್ಟೆಗಳು ಏರುಗತಿಯಲ್ಲಿವೆ ಎಂದು ಮೋನಿಕಾ ತಿಳಿಸಿದ್ದಾರೆ,.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಎಂಟಿಎನ್‌ಎಲ್ ಭಾರ್ತಿ ಒಪ್ಪಂದ
ಎಫ್‌ಡಿಐ ಆಕರ್ಷಿಸಲು ಆರ್ಥಿಕ ನೀತಿಯಲ್ಲಿ ತಿದ್ದುಪಡಿ
ಕೊಟಾಕ್ ಬ್ಯಾಂಕ್ ಪ್ರವ್ರತಕರಾಗಿ ಆನಂದ್ ಮಹೀಂದ್ರಾ
ವಿದೇಶಿ ಬಂಡವಾಳದ ಒಳಹರಿವು ದ್ವಿಗುಣ
ಇಂದು ರಫ್ತು ವಹಿವಾಟುದಾರರಿಂದ ವಾಣಿಜ್ಯ ಸಚಿವರ ಭೇಟಿ