ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸೆಪ್ಟಂಬರ್‌ ವೇಳೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು:ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆಪ್ಟಂಬರ್‌ ವೇಳೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು:ಟಾಟಾ
ಮುಂಬರುವ ಸೆಪ್ಟೆಂಬರ್ ವೇಳೆಗೆ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.

ಕಾರ್ನೆಲ್ ವಿಶ್ವವಿದ್ಯಾಲಯದ ಟ್ರಸ್ಟಿಗಳಾದ ರತನ್ ಟಾಟಾ, ಮೈಕ್ರೋ-ಬ್ಲಾಗಿಂಗ್ ಫೀಡ್ ಆನ್ ಟ್ವಿಟ್ಟರ್ ಕುರಿತು ಆಯೋಜಿಸಿದ ವಿಚಾರ ಸಂಕೀರಣದಲ್ಲಿ ಮಾತನಾಡಿ ದೇಶದಾದ್ಯಂತ ಸೆಪ್ಟೆಂಬರ್ ವೇಳೆಗೆ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಯಲ್ಲಿ ದೊರೆಯಲಿವೆ ಎಂದು ತಿಳಿಸಿದ್ದಾರೆ.

2008ರಲ್ಲಿ ಟಾಟಾ ಮೋಟಾರ್ಸ್‌ನ ವಾರ್ಷಿಕ ಸಭೆಯಲ್ಲಿ ರತನ್ ಟಾಟಾ ಹೇಳಿಕೆ ನೀಡಿ, ಟಾಟಾ ಮೋಟಾರ್ಸ್‌ ಕಂಪೆನಿ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು.

ಜಗತ್ತಿನ ಅತಿ ಕಡಿಮೆ ದರದ ಕಾರು ನ್ಯಾನೋ ಮುಂಬರುವ ಎರಡು ವರ್ಷಗಳಲ್ಲಿ ಅಮೆರಿಕದ ಮಾರುಕಟ್ಟೆಗಳಲ್ಲಿ ದೊರೆಯುವ ನಿರೀಕ್ಷೆಗಳಿವೆ ಎಂದು ಟಾಟಾ ಅವರ ಹೇಳಿಕೆಯನ್ನು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಬಹುನಿರೀಕ್ಷಿತ ನ್ಯಾನೋ ಕಾರು ಮಾರ್ಚ್‌ ತಿಂಗಳಲ್ಲಿ ವಾಣಿಜ್ಯಿಕವಾಗಿ ಬಿಡುಗಡೆಗೊಳಿಸಲಾಗಿದ್ದು, ಕೆಲವೇ ದಿನಗಳಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ ಎಂದು ಟಾಟಾ ಮೂಲಗಳು ತಿಳಿಸಿವೆ.

ವಿಶ್ವವಿದ್ಯಾಲಯದ ವೆಬ್‌ಸೈಟ್ ಪ್ರಕಾರ ಟಾಟಾ ಎಜ್ಯುಕೇಶನ್ ಆಂಡ್ ಡೆವಲೆಪ್‌ಮೆಂಟ್ ಟ್ರಸ್ಟ್ ಭಾರತದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 50 ಮಿಲಿಯನ್ ಡಾಲರ್‌ಗಳನ್ನು ಅಕ್ಟೋಬರ್ 2008ರಲ್ಲಿ ದೇಣಿಗೆಯಾಗಿ ನೀಡಿದೆ.

ಟಾಟಾ- ಕೊರ್ನೆಲ್ ಸಂಸ್ಥೆ ಭಾರತದ ಗ್ರಾಮೀಣ ಭಾಗದಲ್ಲಿರುವ ಬಡಜನತೆಗೆ ಪೌಷ್ಟಿಕ ಅಹಾರ ಮತ್ತು ಕೃಷಿಗೆ ಬೆಂಬಲ ನೀಡಿ ಜೀವನಾಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್ , ರೂಪಾಯಿ ಮೌಲ್ಯದಲ್ಲಿ ಬಲವರ್ಧನೆ
2011ರ ವೇಳೆಗೆ ಅಮೆರಿಕದ ಮಾರುಕಟ್ಟೆಯಲ್ಲಿ ನ್ಯಾನೋ
ಸೆಪ್ಟೆಂಬರ್ ವೇಳೆಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ:ಟಾಟಾ
ಕೋಕಾಕೋಲಾ ಸಿಇಒ ಸ್ಥಾನಕ್ಕೆ ಕೃಷ್ಣಕುಮಾರ್
ಜಿಡಿಪಿ ದರ ಶೇ.7.2ಕ್ಕೆ ಏರಿಕೆ ಸಾಧ್ಯತೆ:ಬಾರ್ಕಲೆ
ಐಟಿಐ ಮಾರಾಟಕ್ಕೆ ಕೇಂದ್ರ ಸರಕಾರ ನಿರ್ಧಾರ