ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಗಸ್ಟ್‌ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಗಸ್ಟ್‌ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ
ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಭಿನ್ನಾಭಿಪ್ರಾಯಗಳನ್ನು ತೊರೆಯುತ್ತಿರುವ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ ಬಹುತೇಕ ಮುಂಬರುವ ಅಗಸ್ಟ್‌ ವೇಳೆಗೆ ಜಾರಿಗೆ ಬರುವ ಸಾಧ್ಯತೆಗಳಿವೆ.

ಥೈಲ್ಯಾಂಡ್‌ನಲ್ಲಿ ಅಗಸ್ಟ್ ತಿಂಗಳಲ್ಲಿ ನಡೆಯಲಿರುವ ಆಸಿಯಾನ್ ಆರ್ಥಿಕ ಸಚಿವರ ಸಮ್ಮೇಳನದಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಲಾಗುವುದು ಎಂದು ಥೈಲ್ಯಾಂಡ್‌ನ ಕೈಗಾರಿಕೋದ್ಯಮ ಸಚಿವ ಚಾನ್‌ಚೈ ಚಿರುಂಗ್‌ರುವಾಂಗ್ ಹೇಳಿದ್ದಾರೆ.

ಭಾರತದೊಂದಿಗೆ ಪಾಮ್ ತೈಲ ಟೀ ಕಾಫಿ ಪೆಪ್ಪರ್ ಮೇಲಿನ ತೆರಿಗೆ ಕಡಿತ ಸಮಸ್ಯೆ ಇತ್ಯರ್ಥವಾಗಲಿದ್ದು, ಮುಂಬರುವ ಅಗಸ್ಟ್ ತಿಂಗಳಲ್ಲಿ ಮುಕ್ತಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ತೆರಿಗೆ ಕಡಿತ ಕುರಿತಂತೆ ಸಂಧಾನ ಮಾತುಕತೆಗಳು ಮುಂದುವರಿದಿದ್ದು, ಮಾತುಕತೆಗಳು ಮುಕ್ತಾಯದ ಹಂತಕ್ಕೆ ತಲುಪಿಲ್ಲ. ಆದರೂ ಅಗಸ್ಟ್ ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲು ಬದ್ಧವಾಗಿವೆ ಎಂದು ಸಚಿವ ಚಿರುಂಗ್‌ರುವಾಂಗ್ ಹೇಳಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬರುವುದರಿಂದಾಗಿ 4700 ವಸ್ತುಗಳ ದರಗಳಲ್ಲಿ ಕಡಿತಗೊಳಿಸಲು ಸದಸ್ಯ ರಾಷ್ಟ್ರಗಳಿಗೆ ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಆಸಿಯಾನ್ ಸದಸ್ಯ ರಾಷ್ಟ್ರಗಳಾದ ವಿಯಟ್ನಾಂ ಮಲೇಷಿಯಾ ಮತ್ತು ಇಂಡೋನೇಷಿಯಾ, ಭಾರತ ಪಾಮ್ ಆಯಿಲ್ ,ಟೀ , ಕಾಫಿ ಮತ್ತು ಪೆಪ್ಪರ್‌ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ಮನವಿ ಮಾಡಿವೆ ಎಂದು ಸಚಿವ ಚಿರುಂಗ್‌ರುವಾಂಗ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೆಪ್ಟಂಬರ್‌ ವೇಳೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು:ಟಾಟಾ
ಫಾರೆಕ್ಸ್ , ರೂಪಾಯಿ ಮೌಲ್ಯದಲ್ಲಿ ಬಲವರ್ಧನೆ
2011ರ ವೇಳೆಗೆ ಅಮೆರಿಕದ ಮಾರುಕಟ್ಟೆಯಲ್ಲಿ ನ್ಯಾನೋ
ಸೆಪ್ಟೆಂಬರ್ ವೇಳೆಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ:ಟಾಟಾ
ಕೋಕಾಕೋಲಾ ಸಿಇಒ ಸ್ಥಾನಕ್ಕೆ ಕೃಷ್ಣಕುಮಾರ್
ಜಿಡಿಪಿ ದರ ಶೇ.7.2ಕ್ಕೆ ಏರಿಕೆ ಸಾಧ್ಯತೆ:ಬಾರ್ಕಲೆ