ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುಂಬೈ , ಬೆಂಗಳೂರು ಜಾಗತಿಕ ಹೂಡಿಕೆ ಕೇಂದ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ , ಬೆಂಗಳೂರು ಜಾಗತಿಕ ಹೂಡಿಕೆ ಕೇಂದ್ರಗಳು
ಆರ್ಥಿಕ ಕುಸಿತದ ಮಧ್ಯೆಯು ಇಂಗ್ಲೆಂಡ್‌ನಲ್ಲಿ ಹೂಡಿಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಅಮೆರಿಕದ ನಂತರ ಭಾರತ ಬೃಹತ್ ಹೂಡಿಕೆ ರಾಷ್ಟ್ರವಾಗಿ ಹೊರಹೊಮ್ಮಿದ್ದು, ನೂತನ ಅಧ್ಯಯನದ ಪ್ರಕಾರ ಮುಂಬೈ ಮತ್ತು ಬೆಂಗಳೂರು ಜಾಗತಿಕ ಹೂಡಿಕೆಗೆ ಪ್ರಶಸ್ತ ಸ್ಥಳಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಎರ್ನೆಸ್ಟ್‌ ಆಂಡ್ ಯಂಗ್ ಅಧ್ಯಯನ ಸಂಸ್ಥೆಯ ವಾರ್ಷಿಕ ಸಮೀಕ್ಷೆ ಪ್ರಕಾರ , ಪ್ರಸಕ್ತ ವರ್ಷದಲ್ಲಿ ಇಂಗ್ಲೆಂಡ್‌ನಲ್ಲಿ ಭಾರತೀಯ ಕಂಪೆನಿಗಳು 49 ಯೋಜನೆಗಳಲ್ಲಿ ಹೂಡಿಕಎ ಮಾಡಿದ್ದು, ಸಾಂಪ್ರದಾಯಿಕ ಹೂಡಿಕೆದಾರ ರಾಷ್ಟ್ರಗಳಾದ ಫ್ರಾನ್ಸ್ ಮತ್ತು ಜರ್ಮನ್‌ ದೇಶಗಳಿಗಿಂತ ಭಾರತ ಮುನ್ನಡೆ ಸಾಧಿಸಿದೆ. ಅಮೆರಿಕ 263 ಯೋಜನೆಗಳಲ್ಲಿ ಹೂಡಿಕೆ ಮಾಡಿದೆ.

ಯುರೋಪ್ ರಾಷ್ಟ್ರಗಳ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಇಂಗ್ಲೆಂಡ್ ಮುಂಚೂಣಿಯಲ್ಲಿದ್ದು, 686 ಹೊಸ ಯೋಜನೆಗಳಲ್ಲಿ 262ರಲ್ಲಿ ಯುರೋಪ್ ಹೂಡಿಕೆ ಮಾಡಿದೆ. ಆದರೆ ಒಟ್ಟಾರೆ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಗಮನಿಸಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.13 ರಷ್ಟು ಕುಸಿತ ಕಂಡಿದೆ.

ಯುರೋಪ್ ರಾಜಧಾನಿಗಳಿಗೆ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಏಷ್ಯಾ ರಾಷ್ಟ್ರಗಳ ನಗರಗಳಾದ ಶಾಂಘೈ ಮತ್ತು ಬೆಂಗಳೂರು ಮುಂದಿನ ದಿನಗಳಲ್ಲಿ ಹೂಡಿಕೆಯಲ್ಲಿ ಸವಾಲಾಗಿ ಪರಿಣಮಿಸಲಿವೆ.ಗೂಗಲ್ ಅಥವಾ ಮೈಕ್ರೋಸಾಫ್ಟ್‌ ಕಂಪೆನಿಗಳ ಉದ್ಯಮಿಗಳಿಗೆ ಉದಯೋನ್ಮುಖ ಮಾರುಕಟ್ಟೆಗಳ ಬಗ್ಗೆ ವಿವರಣೆ ಕೇಳಿದಾಗ, ನ್ಯೂಯಾರ್ಕ್ ಮತ್ತು ಸಿಲಿಕಾನ್ ವ್ಯಾಲಿ ಅಥವಾ ಲಂಡನ್‌ ಹೊರತುಪಡಿಸಿ ಶಾಂಘೈ ಮತ್ತು ಮುಂಬೈ ಎಂದು ಹೇಳಿಕೆ ನೀಡಿದ್ದಾರೆ ಎಂದು ಎರ್ನೆಸ್ಟ್ ಆಂಡ್ ಯಂಗ್ ಅಧ್ಯಯನ ಸಂಸ್ಥೆ ಸಮೀಕ್ಷೆಯಲ್ಲಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಗಸ್ಟ್‌ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ
ಸೆಪ್ಟಂಬರ್‌ ವೇಳೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು:ಟಾಟಾ
ಫಾರೆಕ್ಸ್ , ರೂಪಾಯಿ ಮೌಲ್ಯದಲ್ಲಿ ಬಲವರ್ಧನೆ
2011ರ ವೇಳೆಗೆ ಅಮೆರಿಕದ ಮಾರುಕಟ್ಟೆಯಲ್ಲಿ ನ್ಯಾನೋ
ಸೆಪ್ಟೆಂಬರ್ ವೇಳೆಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ:ಟಾಟಾ
ಕೋಕಾಕೋಲಾ ಸಿಇಒ ಸ್ಥಾನಕ್ಕೆ ಕೃಷ್ಣಕುಮಾರ್