ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಮೆರಿಕ ಮಾರುಕಟ್ಟೆಗೆ ಶೀಘ್ರದಲ್ಲಿ ನ್ಯಾನೋ:ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಮಾರುಕಟ್ಟೆಗೆ ಶೀಘ್ರದಲ್ಲಿ ನ್ಯಾನೋ:ಟಾಟಾ
PTI
ಜಗತ್ತಿನ ಅತಿ ಕಡಿಮೆ ದರದ ನ್ಯಾನೋ ಕಾರು ಮುಂಬರುವ ಎರಡು ವರ್ಷಗಳಲ್ಲಿ ಅಮೆರಿಕದ ಮಾರುಕಟ್ಟೆಗೆ ಲಗ್ಗೆ ಹಾಕಲಿದೆ ಎಂದು ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.

ಅಮೆರಿಕದ ವಾಹನೋದ್ಯಮಗಳ ಗುಣಮಟ್ಟದ ರೀತಿಯಲ್ಲಿ ನ್ಯಾನೋ ಕಾರುಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಆದ್ದರಿಂದ ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎಂದು ಕಾರ್ನೆಲ್ ಗ್ಲೋಬಲ್ ಫೋರಂ ಆನ್ ಸಸ್ಟೆನೇಬಲ್ ಎಂಟರ್‌ಪ್ರೈಸ್ ಚರ್ಚಾಸಭೆಯಲ್ಲಿ ರತನ್ ಟಾಟಾ ತಿಳಿಸಿದ್ದಾರೆ.

ನ್ಯಾನೋ ಯುರೋಪಿಯನ್ ಮಾದರಿಯ ಕಾರು 2011ರ ವೇಳೆಗೆ 2300 ಡಾಲರ್ ದರ ನಿಗದಿಪಡಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ. ನಾಲ್ಕು ಆಸನಗಳುಳ್ಳ ಕಾರು ಪ್ರತಿ ಲೀಟರ್‌ಗೆ 28 ಕಿ.ಮಿ ದೂರವನ್ನು ಕ್ರಮಿಸಲಿದೆ ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್‌ ವಾಹನೋದ್ಯಮ ಸಂಸ್ಥೆ ಗ್ಯಾಸೋಲಿನ್, ಸ್ವಚ್ಚ ಡೀಸೆಲ್, ಬಯೋಫ್ಯೂಲ್ ಮತ್ತು ಬ್ಯಾಟರಿ‌ಗಳಿಂದ ಚಲಿಸುವ ಕಾರುಗಳನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ರತನ್ ಟಾಟಾ ತಿಳಿಸಿದ್ದಾರೆ.

ಜನೆವರಿ 2008ರಲ್ಲಿ ನ್ಯಾನೋ ಕಾರುಗಳನ್ನು ಶೋರೂಂಗಳಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿ ಭೂ ವಿವಾದ, ಪ್ರತಿಭಟನೆಗಳಿಂದಾಗಿ ಉತ್ಪಾದನೆಯಲ್ಲಿ ವಿಳಂಬವಾಯಿತು. ಪ್ರಸಕ್ತ ವರ್ಷದ.ಜುಲೈ ವೇಳೆಗೆ ಕಾರುಗಳು ದೊರೆಯಲಿದ್ದು, ಮೊದಲು 10 ಸಾವಿರ ಕಾರುಗಳ ಮಾಲೀಕರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಟಾಟಾ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ , ಬೆಂಗಳೂರು ಜಾಗತಿಕ ಹೂಡಿಕೆ ಕೇಂದ್ರಗಳು
ಅಗಸ್ಟ್‌ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ
ಸೆಪ್ಟಂಬರ್‌ ವೇಳೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು:ಟಾಟಾ
ಫಾರೆಕ್ಸ್ , ರೂಪಾಯಿ ಮೌಲ್ಯದಲ್ಲಿ ಬಲವರ್ಧನೆ
2011ರ ವೇಳೆಗೆ ಅಮೆರಿಕದ ಮಾರುಕಟ್ಟೆಯಲ್ಲಿ ನ್ಯಾನೋ
ಸೆಪ್ಟೆಂಬರ್ ವೇಳೆಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ:ಟಾಟಾ