ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಎಂ ದಿವಾಳಿ? ಐದು ಹೊಸ ಮಾಡೆಲ್ ಕಾರುಗಳ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಎಂ ದಿವಾಳಿ? ಐದು ಹೊಸ ಮಾಡೆಲ್ ಕಾರುಗಳ ಬಿಡುಗಡೆ
PTI
ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಿವಾಳಿ ಘೋಷಿಸಿರಬಹುದು . ಆದರೆ ಮುಂಬರುವ ಎರಡು ವರ್ಷಗಳಲ್ಲಿ ಐದು ಮಾಡೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಅಧಿಕಾರಿಗಳು ಹಾಗೂ ಬಿಡಿಭಾಗಗಳ ಸರಬರಾಜುದಾರರು ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ವಾರ್ಷಿಕವಾಗಿ 8 ಲಕ್ಷ ಕಾರುಗಳ ಬೃಹತ್ ವಹಿವಾಟು ನಡೆಯುವುದರಿಂದ ಕಾರುಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಜನರಲ್ ಮೋಟಾರ್ಸ್ ವಾಹನೋದ್ಯಮ ಸಂಸ್ಥೆ ಎರಡು ಮಾಡೆಲ್ ಚಿಕ್ಕ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ವರ್ಷದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಗಳಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜನರಲ್ ಮೋಟಾರ್ಸ್‌ವ ಕಾರ್ಪೋರೇಟ್ ವ್ಯವಹಾರಗಳ ಉಪಾಧ್ಯಕ್ಷ ಪಿ.ಬಾಲಚಂದ್ರನ್ ಮಾತನಾಡಿ, ಭಾರತದ ಕಾರುಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಎರಡು ಕಾರುಗಳ ಮಾಡೆಲ್ ಅಭಿವೃದ್ಧಿಪಡಿಸುತ್ತಿದ್ದು, ಪೆಟ್ರೋಲ್ ,ಡೀಸೆಲ್ ಹೊರತುಪಡಿಸಿ ಸಿಎನ್‌ಜಿ ಮತ್ತು ಎಲ್‌ಪಿಜಿಗಳನ್ನು ಬಳಸಬಹುದಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಕಾರುಗಳು ಮಾರುಕಟ್ಟೆಗೆ ಬರಲಿದ್ದು ವಾರ್ಷಿಕವಾಗಿ 2.25 ಲಕ್ಷ ಕಾರುಗಳನ್ನು ಉತ್ಪಾದಿಸಲಾಗುವುದು ಎಂದು ತಿಳಿಸಿದ್ದಾರೆ.

ವಾಹನೋದ್ಯಮ ಸಂಸ್ಥೆಗೆ ಬಿಡಿಭಾಗಗಳನ್ನು ತಯಾರಿಸುವ ಕಂಪೆನಿಯ ಉತ್ಪಾದಕರು ಮಾತನಾಡಿ, ಜನರಲ್ ಮೋಟಾರ್ಸ್ ಕಂಪೆನಿ ಮುಂದಿನ ವರ್ಷಾರಂಭಕ್ಕೆ ಎರಡು ಮಾಡೆಲ್ ಕಾರುಗಳನ್ನು ನಿಗದಿಯಂತೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ ಮಾರುಕಟ್ಟೆಗೆ ಶೀಘ್ರದಲ್ಲಿ ನ್ಯಾನೋ:ಟಾಟಾ
ಮುಂಬೈ , ಬೆಂಗಳೂರು ಜಾಗತಿಕ ಹೂಡಿಕೆ ಕೇಂದ್ರಗಳು
ಅಗಸ್ಟ್‌ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ
ಸೆಪ್ಟಂಬರ್‌ ವೇಳೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು:ಟಾಟಾ
ಫಾರೆಕ್ಸ್ , ರೂಪಾಯಿ ಮೌಲ್ಯದಲ್ಲಿ ಬಲವರ್ಧನೆ
2011ರ ವೇಳೆಗೆ ಅಮೆರಿಕದ ಮಾರುಕಟ್ಟೆಯಲ್ಲಿ ನ್ಯಾನೋ