ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಎಂ ಇಂಡಿಯಾದಿಂದ ಸ್ಪಾರ್ಕ್ ಎಲ್‌ಪಿಜಿ ಕಾರು ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಎಂ ಇಂಡಿಯಾದಿಂದ ಸ್ಪಾರ್ಕ್ ಎಲ್‌ಪಿಜಿ ಕಾರು ಬಿಡುಗಡೆ
ಅಮೆರಿಕದಲ್ಲಿ ಪಿತೃ ಸಂಸ್ಥೆ ಜನರಲ್‌ ಮೋಟಾರ್ಸ್ ಕಂಪೆನಿ ದಿವಾಳಿ ಘೋಷಿಸಿದರೂ ಏದೆಗುಂದದ ಜನರಲ್ ಮೋಟಾರ್ಸ್ ಇಂಡಿಯಾ, ಎಲ್‌ಪಿಜಿ ಆವೃತ್ತಿಯ ಸಣ್ಣ ಕಾರು ಸ್ಪಾರ್ಕ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, 3.52 ಲಕ್ಷ (ಶೋರೂಂ ಹೊರತುಪಡಿಸಿ) ರೂ.ನಿಗದಿಪಡಿಸಿದೆ.

ಮುಂದಿನ ದಿನಗಳಲ್ಲಿ ವಿಭಿನ್ನ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸ್ಪಾರ್ಕ್‌ನ ವಿವಿಧ ರೀತಿಯ ಮಾಡೆಲ್‌‌ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ಗ್ರಾಹಕರಿಗೆ ಇಷ್ಟವಾದ ಕಾರು, ನಿಗದಿತ ಸಮಯದಲ್ಲಿ ನೀಡಿ ವಾಹನೋದ್ಯಮ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನವನ್ನು ಪಡೆಯುವ ಗುರಿಯನ್ನು ಹೊಂದಿದ್ದೇವೆ ಎಂದು ಜನರಲ್ ಮೋಟಾರ್ಸ್‌ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲಿಮ್ ಹೇಳಿದ್ದಾರೆ.

ಜನರಲ್ ಮೋಟಾರ್ಸ್ ಕಂಪೆನಿ, ಸೆಪ್ಟೆಂಬರ್‌ನಲ್ಲಿ ಅತ್ಯಾಧುನಿಕ ಐಶಾರಾಮಿ ಕಾರು ಸೆಡಾನ್ ಶೆರ್ವಾಲೆಟ್ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದು, ಮತ್ತೊಂದು ಮಿನಿ ಕಾರು ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ಮೂಲಕಂಪೆನಿ ಜನರಲ್ ಮೋಟಾರ್ಸ್‌, ಅಮೆರಿಕದಲ್ಲಿ ದಿವಾಳಿ ಘೋಷಿಸಿದರೂ ಭಾರತದಲ್ಲಿರುವ ಕಂಪೆನಿಯ ಕಾರ್ಯಾಚರಣೆಯ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಆದರೆ ಮಹಾರಾಷ್ಟ್ರದ ತಲೇಗಾಂವ್‌ನಲ್ಲಿರುವ ಇಂಜಿನ್ ತಯಾರಿಕೆ ಘಟಕ ನಿರ್ಮಾಣಕ್ಕೆ ಆರ್ಥಿಕ ಸಮಸ್ಯೆ ಏದುರಾಗಿದೆ ಎಂದು ಕಂಪೆನಿ ಇತ್ತೀಚೆಗೆ ಹೇಳಿಕೆ ನೀಡಿತ್ತು..

ಜನರಲ್ ಮೋಟಾರ್ಸ್ ಕಂಪೆನಿ ದಿವಾಳಿ ಘೋಷಿಸಿರುವುದು ಕೇವಲ ಅಮೆರಿಕದ ಕಾರ್ಯಾಚರಣೆಗಳಿಗೆ ಮಾತ್ರ. ಭಾರತದಲ್ಲಿ ಎಂದಿನಂತೆ ಉದ್ಯೋಗಿಗಳು, ಸರಬರಾಜುದಾರರು ಗ್ರಾಹಕರ ಪಾಲುದಾರಿಕೆಯೊಂದಿಗೆ ಮುಂದುವರಿಯಲಿದೆ ಎಂದು ಕಾರ್ಲ್ ಸ್ಲಿಮ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಎಂ ದಿವಾಳಿ? ಐದು ಹೊಸ ಮಾಡೆಲ್ ಕಾರುಗಳ ಬಿಡುಗಡೆ
ಅಮೆರಿಕ ಮಾರುಕಟ್ಟೆಗೆ ಶೀಘ್ರದಲ್ಲಿ ನ್ಯಾನೋ:ಟಾಟಾ
ಮುಂಬೈ , ಬೆಂಗಳೂರು ಜಾಗತಿಕ ಹೂಡಿಕೆ ಕೇಂದ್ರಗಳು
ಅಗಸ್ಟ್‌ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ
ಸೆಪ್ಟಂಬರ್‌ ವೇಳೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು:ಟಾಟಾ
ಫಾರೆಕ್ಸ್ , ರೂಪಾಯಿ ಮೌಲ್ಯದಲ್ಲಿ ಬಲವರ್ಧನೆ