ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನೇರ ತೆರಿಗೆ ಸಂಗ್ರಹದಲ್ಲಿ ಶೇ.17 ರಷ್ಟು ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇರ ತೆರಿಗೆ ಸಂಗ್ರಹದಲ್ಲಿ ಶೇ.17 ರಷ್ಟು ಏರಿಕೆ
ಕೇಂದ್ರ ಸರಕಾರದ ನೇರ ತೆರಿಗೆ ಸಂಗ್ರಹ ಹಿಂದಿನ ವರ್ಷದಲ್ಲಿ 10,198 ಕೋಟಿ ರೂಪಾಯಿಗಳಾಗಿದ್ದು, ಪ್ರಸಕ್ತ ಮೇ 2009ರಲ್ಲಿ ಶೇ.16.88 ರಷ್ಟು ಏರಿಕೆಯಾಗಿ 11,919 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿರುವುದು ಆರ್ಥಿಕತೆ ಚೇತರಿಕೆಯ ಸ್ಪಷ್ಟ ಸಂಕೇತವಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ವಿತ್ತ ಸಚಿವಾಲಯ ಬಜೆಟ್ ಸಿದ್ದಪಡಿಸುವಲ್ಲಿ ನಿರತವಾಗಿದ್ದು, ತೆರಿಗೆ ಸಂಗ್ರಹ ಏರಿಕೆಯಿಂದಾಗಿ ಅನಗತ್ಯ ವೆಚ್ಚಗಳ ಮಧ್ಯೆಯು ಆರ್ಥಿಕ ಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟು ಪ್ಯಾಕೇಜ್‌ಗಳಿಗೆ ಹಣ ಬಿಡುಗಡೆಗೆ ಸಹಾಯಕವಾಗುತ್ತದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ.3.19 ರಷ್ಟು ಕುಸಿತ ಕಂಡು 12,642 ಕೋಟಿ ರೂಪಾಯಿಗಳಿಂದ 12,239 ಕೋಟಿ ರೂಪಾಯಿಗಳಿಗೆ ಇಳಿಕೆ ಕಂಡಿತ್ತು ಎಂದು ತೆರಿಗೆ ಸಂಗ್ರಹ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ , ತೆರಿಗೆ ಸಂಗ್ರಹ ಏರಿಕೆ ಆರಂಭಿಕ ಸೂಚನೆಗಳಾಗಿದ್ದು, ಆರಂಭಿಕ ತ್ರೈಮಾಸಿಕ ಅವಧಿಯಲ್ಲಿ ಕಾರ್ಪೋರೇಟ್ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿರುವುದರಿಂದ ಆರ್ಥಿಕತೆ ಸುಸ್ಥಿತಿಯತ್ತ ಸಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

2007-08 ರಲ್ಲಿ 22,840 ಕೋಟಿ ರೂಪಾಯಿಗಳಾಗಿದ್ದ ನೇರ ತೆರಿಗೆ ಸಂಗ್ರಹ ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಎರಡು ತಿಂಗಳಲ್ಲಿ ಶೇ.5.77 ರಷ್ಟು ಏರಿಕೆಯಾಗಿದೆ ಎಂದು ಸರಕಾರದ ಅಂಕಿ ಅಂಶಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
5 ಸಾವಿರ ಉದ್ಯೋಗಿಗಳ ವಜಾ: ಸತ್ಯಂ
ಅಮೆರಿಕದಲ್ಲಿ 345,000 ಉದ್ಯೋಗಿಗಳ ವಜಾ
ಸಿಂಗಾಪೂರ್‌ನಲ್ಲಿ ಶಾಖೆಗಳು ದ್ವಿಗುಣ: ಎಸ್‌ಬಿಐ
ಜಿಎಂ ಇಂಡಿಯಾದಿಂದ ಸ್ಪಾರ್ಕ್ ಎಲ್‌ಪಿಜಿ ಕಾರು ಬಿಡುಗಡೆ
ಜಿಎಂ ದಿವಾಳಿ? ಐದು ಹೊಸ ಮಾಡೆಲ್ ಕಾರುಗಳ ಬಿಡುಗಡೆ
ಅಮೆರಿಕ ಮಾರುಕಟ್ಟೆಗೆ ಶೀಘ್ರದಲ್ಲಿ ನ್ಯಾನೋ:ಟಾಟಾ