ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನಿಂದ 5 ಸಾವಿರ ಸಿಬ್ಬಂದಿಗಳ ವಜಾ ಸಾಧ್ಯತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನಿಂದ 5 ಸಾವಿರ ಸಿಬ್ಬಂದಿಗಳ ವಜಾ ಸಾಧ್ಯತೆ?
ಸತ್ಯಂ ಕಂಪ್ಯೂಟರ್ ಸಂಸ್ಥೆಯನ್ನು ಶೀಘ್ರದಲ್ಲಿ ಟೆಕ್ ಮಹೀಂದ್ರಾ ಅಧಿಕಾರವಹಿಸಿಕೊಳ್ಳಲಿದ್ದು, ನಂತರ ಜೂನ್ 11 ರಂದು ನಡೆಯಲಿರುವ ಅಡಳಿತ ಮಂಡಳಿಯ ಸಭೆಯಲ್ಲಿ ಕಂಪೆನಿಯ 5 ಸಾವಿರ ಸಿಬ್ಬಂದಿಗಳ ವಜಾ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ

ಮೂಲಗಳ ಪ್ರಕಾರ ಮುಂಬರುವ ಗುರುವಾರ ಅಥವಾ ಶುಕ್ರವಾರ ಸಭೆ ನಡೆಯಲಿದ್ದು, ಸರಕಾರದಿಂದ ನೇಮಕಗೊಂಡ ಆರು ಅಡಳಿತ ಮಂಡಳಿಯ ಸದಸ್ಯರು ಹಾಗೂ ಟೆಕ್ ಮಹೀಂದ್ರಾ ಸಂಸ್ಥೆಯ ನಾಲ್ಕು ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸತ್ಯಂ ಕಂಪ್ಯೂಟರ್ಸ್‌ನ ವಕ್ತಾರರು ಮಾತನಾಡಿ , ಸಭೆಯಲ್ಲಿ ಕಂಪೆನಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತಂತೆ ಚರ್ಚಿಸಲಾಗುವುದು ಎಂದು ಹೇಳಿದ್ದು, ಸಭೆಯ ಉದ್ದೇಶದ ವಿವರಗಳು ಸಿಬ್ಬಂದಿಯ ಕಡಿತ ಕುರಿತಂತೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

ಟೆಕ್ ಮಹೀಂದ್ರಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೀತ್ ನಯ್ಯರ್ ಇತ್ತೀಚೆಗೆ ಹೇಳಿಕೆಯನ್ನು ನೀಡಿ ಸತ್ಯಂನಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಗಳಿದ್ದು, ಕನಿಷ್ಟ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಗುತ್ತಿದ್ಗು, ಕಂಪೆನಿಯ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ಆದರೆ, ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿಕೆಯೊಂದನ್ನು ನೀಡಿ ಸತ್ಯಂ ಸಂಸ್ಥೆ ಉದ್ಯೋಗಿಗಳನ್ನು ವಜಾಗೊಳಿಸಿದಲ್ಲಿ ಸರಕಾರ ಕಣ್ಣುಮುಚ್ಚಿ ಕುಳಿತುಕೊಳ್ಳುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಯಿಸಿದ್ದರು .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೇರ ತೆರಿಗೆ ಸಂಗ್ರಹದಲ್ಲಿ ಶೇ.17 ರಷ್ಟು ಏರಿಕೆ
5 ಸಾವಿರ ಉದ್ಯೋಗಿಗಳ ವಜಾ: ಸತ್ಯಂ
ಅಮೆರಿಕದಲ್ಲಿ 345,000 ಉದ್ಯೋಗಿಗಳ ವಜಾ
ಸಿಂಗಾಪೂರ್‌ನಲ್ಲಿ ಶಾಖೆಗಳು ದ್ವಿಗುಣ: ಎಸ್‌ಬಿಐ
ಜಿಎಂ ಇಂಡಿಯಾದಿಂದ ಸ್ಪಾರ್ಕ್ ಎಲ್‌ಪಿಜಿ ಕಾರು ಬಿಡುಗಡೆ
ಜಿಎಂ ದಿವಾಳಿ? ಐದು ಹೊಸ ಮಾಡೆಲ್ ಕಾರುಗಳ ಬಿಡುಗಡೆ