ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕರ್ನಾಟಕದಲ್ಲಿ 'ರೈತ ಸ್ನೇಹಿ' ಬಸ್‌...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕದಲ್ಲಿ 'ರೈತ ಸ್ನೇಹಿ' ಬಸ್‌...
ಈ ಬಸ್‌ಗೆ ಡೀಸೆಲ್ ಬೇಡ, ಪೆಟ್ರೋಲ್ ಕೂಡ ಬೇಡ. ಇದು ಸಂಪೂರ್ಣ ರೈತ ಸ್ನೇಹಿ ಬಸ್. ಎಥೆನಾಲ್ ಬಳಸಿದರೆ ಸಾಕು, ಈ ಬಸ್ ಸರಾಗವಾಗಿ ಚಲಿಸುತ್ತದೆ.

ಸಾರಿಗೆ ಸಚಿವ ಅಶೋಕ್ ನೇತೃತ್ವದಲ್ಲಿ ನಗರದಲ್ಲಿ ಈ ವಿನೂತನ ಪ್ರಯೋಗ ಜಾರಿಗೆ ಬಂದಿದೆ. ಸಕ್ಕರೆ ಕಾರ್ಖಾನೆಗಳಲ್ಲಿನ ಉಪ ಉತ್ಪನ್ನ ಎಥೆನಾಲ್ ಈ ಬಸ್ಸಿನ ಪ್ರಮುಖ ಇಂಧನ.

ಎಥೆನಾಲ್ ಒಂದು ಜೈವಿಕ ಇಂಧನ. ಇದು ರಾಷ್ಟ್ರದಲ್ಲೇ ಮೊದಲ ಪ್ರಯೋಗ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿರುವ ಇಂದಿನ ದಿನಗಳಲ್ಲಿ ಇದು ಪರಿಸರ ಸ್ನೇಹಿಯಾಗಿರುವುದಲ್ಲದೆ, ಕೃಷಿಕರಿಗೆ ವರದಾನವಾಗಲಿದೆ ಎಂದು ಅಶೋಕ್ ವಿವರಿಸಿದ್ದಾರೆ.

ಈ ಜೈವಿಕ ಇಂಧನದಲ್ಲಿ ಶೇ 70 ಎಥೆನಾಲ್, ಶೇ 30 ಖನಿಜಾಂಶ ರಹಿತ ನೀರಿನ ಬಳಕೆಯಿಂದ ಬಸ್ ಸಂಚರಿಸಲು ಸಾಧ್ಯ. ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯದ ಈ ಬಸ್‌ಗೆ ರೈತ ಬಂಧು ಎಂದೇ ಸರ್ಕಾರ ನಾಮಕರಣಗೊಳಿಸಿರುವುದು ವಿಶೇಷ. ಮುಂದಿನ ದಿನಗಳಲ್ಲಿ 5000 ಸಾವಿರ ಜೈವಿಕ ಇಂಧನದ ಬಸ್‌ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿರುವುದು ಅವರು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರ್ತಿ-ಎಂಟಿಎನ್‌ ನಡುವೆ ಸರಕಾರದ ಮಧ್ಯಸ್ಥಿಕೆಯಿಲ್ಲ: ಖುರ್ಷಿದ್
ಕೃಷಿ ಆಧಾರಿತ ಕೈಗಾರಿಕಾ ನೀತಿಗೆ ಸರಕಾರ ಯೋಜನೆ
ಸತ್ಯಂನಿಂದ 5 ಸಾವಿರ ಸಿಬ್ಬಂದಿಗಳ ವಜಾ ಸಾಧ್ಯತೆ?
ನೇರ ತೆರಿಗೆ ಸಂಗ್ರಹದಲ್ಲಿ ಶೇ.17 ರಷ್ಟು ಏರಿಕೆ
5 ಸಾವಿರ ಉದ್ಯೋಗಿಗಳ ವಜಾ: ಸತ್ಯಂ
ಅಮೆರಿಕದಲ್ಲಿ 345,000 ಉದ್ಯೋಗಿಗಳ ವಜಾ