ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ಸ್ಟೀಲ್ ಮಾರಾಟದಲ್ಲಿ ಶೇ.18 ರಷ್ಟು ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಸ್ಟೀಲ್ ಮಾರಾಟದಲ್ಲಿ ಶೇ.18 ರಷ್ಟು ಏರಿಕೆ
ವಾಹನೋದ್ಯಮ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಗಳಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಉಕ್ಕು ಮಾರಾಟದಲ್ಲಿ ಶೇ.18 ರಷ್ಟು ಏರಿಕೆಯಾಗಿ 4.69 ಲಕ್ಷ ಟನ್‌ಗಳಿಗೆ ತಲುಪಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ 3.97 ಲಕ್ಷ ಟನ್ ಮಾರಾಟ ಮಾಡಲಾಗಿತ್ತು ಎಂದು ಟಾಟಾ ಸ್ಟೀಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ ತಿಂಗಳ ಅವಧಿಯನ್ನು ಪರಿಷ್ಕರಿಸಿದಾಗ ಟಾಟಾ ಸ್ಟೀಲ್ ಉತ್ಪಾದನೆಯಲ್ಲಿ ಶೇ.23 ರಷ್ಟು ಏರಿಕೆ ಕಂಡು 5.01 ಲಕ್ಷಟನ್ ಉಕ್ಕು ಉತ್ಪಾದಿಸಲಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ 4.08 ಲಕ್ಷ ಟನ್ ಉತ್ಪಾದಿಸಲಾಗಿತ್ತು.

ಕಟ್ಟಡ ನಿರ್ಮಾಣ ಉದ್ಯಮಗಳಲ್ಲಿ ಬಳಸುವ ಉಕ್ಕಿನ ವಸ್ತುಗಳ ಮಾರಾಟದಲ್ಲಿ ಶೇ.34 ರಷ್ಟು ಏರಿಕೆಯಾಗಿದ್ದು, ವಾಹನೋದ್ಯಮ ಕ್ಷೇತ್ರಗಳಲ್ಲಿ ಬಳಸುವ ಸಮತಟ್ಟಾದ ಉಕ್ಕಿನ ವಸ್ತುಗಳ ಮಾರಾಟದಲ್ಲಿ ಶೇ.9 ರಷ್ಟು ಏರಿಕೆ ಕಂಡಿದೆ.

ಜಮ್‌ಶೆಡ್‌ಪುರ್‌ನಲ್ಲಿರುವ ಉಕ್ಕಿನ ಘಟಕ ಅತ್ಯುತ್ತಮ ಗುರಿಯನ್ನು ತಲುಪಿದ್ದು, ಮೇ ತಿಂಗಳ ಅವಧಿಯಲ್ಲಿ 2.18ಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಿ ದಾಖಲೆ ಸ್ಥಾಪಿಸಿದೆ. ಮತ್ತೊಂದು ಘಟಕವಾದ ಮರ್ಚಂಟ್ ಮಿಲ್ ಕೂಡಾ ಮೇ ತಿಂಗಳ ಅವಧಿಯಲ್ಲಿ 30,710 ಟನ್ ಉಕ್ಕು ಉತ್ಪಾದನೆಯಲ್ಲಿ ಏರಿಕೆ ಕಂಡಿದೆ.ಕಳೆದ ವರ್ಷ ಮೇ ತಿಂಗಳ ಅವಧಿಯಲ್ಲಿ 28,505 ಟನ್ ಉಕ್ಕು ಉತ್ಪಾದಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನ: ಪ್ರತಿ 10 ಗ್ರಾಂಗೆ 14,880 ರೂ.
ಕರ್ನಾಟಕದಲ್ಲಿ 'ರೈತ ಸ್ನೇಹಿ' ಬಸ್‌...
ಭಾರ್ತಿ-ಎಂಟಿಎನ್‌ ನಡುವೆ ಸರಕಾರದ ಮಧ್ಯಸ್ಥಿಕೆಯಿಲ್ಲ: ಖುರ್ಷಿದ್
ಕೃಷಿ ಆಧಾರಿತ ಕೈಗಾರಿಕಾ ನೀತಿಗೆ ಸರಕಾರ ಯೋಜನೆ
ಸತ್ಯಂನಿಂದ 5 ಸಾವಿರ ಸಿಬ್ಬಂದಿಗಳ ವಜಾ ಸಾಧ್ಯತೆ?
ನೇರ ತೆರಿಗೆ ಸಂಗ್ರಹದಲ್ಲಿ ಶೇ.17 ರಷ್ಟು ಏರಿಕೆ