ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಾಜೀವ್ ಮೋಟ್ವಾನಿ ಸಾವು ಪೊಲೀಸರಿಂದ ತನಿಖೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜೀವ್ ಮೋಟ್ವಾನಿ ಸಾವು ಪೊಲೀಸರಿಂದ ತನಿಖೆ
ಗೂಗಲ್ ಸಹಸಂಸ್ಥಾಪಕರಿಗೆ ಸ್ಪೂರ್ತಿ ನೀಡಿದ ಮತ್ತು ಕಂಪ್ಯೂಟರ್ ವಿಜ್ಞಾನಿಗಳಿಗೆ ಪ್ರಭಾವ ಬೀರಿದ ಸ್ಟಾನ್‌ಫೋರ್ಡ್ ಪ್ರೋಫೇಸರ್ ಐಐಟಿ ಪದವೀಧರ ರಾಜೀವ್ ಮೋಟ್ವಾನಿ ಅವರ ಅಸಹಜ ಸಾವಿನ ಕುರಿತಂತೆ ಪೊಲೀಸರು ತನಿಖೆಯನ್ನು ಮುಂದುವರಿಸಲು ಶವಪರೀಕ್ಷೆಯ ವರದಿಗಾಗಿ ಕಾಯಿತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋಟ್ವಾನಿ ಅವರದು ಸಹಜ ಮರಣವಾಗಿರಬಹುದು ಅಥವಾ ಹತ್ಯೆ ಪ್ರಕರಣವಾಗಿದೆಯೇ ಎನ್ನುವ ಕುರಿತಂತೆ ನಾವು ಬಿಕ್ಕಟ್ಟಿನಲ್ಲಿದ್ದು ಶವಪರೀಕ್ಷೆಯ ವರದಿಯ ನಂತರ ಸ್ಪಷ್ಟವಾಗಲಿದೆ ಎಂದು ಕ್ಯಾಲಿಫೋರ್ನಿಯಾ ಪೊಲೀಸ್ ಸಾರ್ಜೆಂಟ್ ಟಿಮ್ ಲಿಂಚ್ ಹೇಳಿದ್ದಾರೆ.

ಪೊಲೀಸ್ ಸಾರ್ಜೆಂಟ್ ಟಿಮ್ ಲಿಂಚ್ ಅವರ ಪ್ರಕಾರ , ಶುಕ್ರವಾರದಂದು ಬೆಳಿಗ್ಗೆ ತುರ್ತುಕರೆಯೊಂದು ಬಂದಿದ್ದು ಅರ್ಥರಟನ್‌ ಅವೆನ್ಯೂದಲ್ಲಿರುವ ಮೋಟ್ವಾನಿ ಅವರ ಮನೆಯ ಹಿಂಭಾಗದಲ್ಲಿರುವ ಈಜುಕೊಳದಲ್ಲಿ ಮೃತದೇಹ ಕಂಡುಬಂದಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿಸಿದ್ದಾರೆ.

ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಈಜುಕೊಳದಲ್ಲಿದ್ದ ಮೋಟ್ವಾನಿ ಅವರ ದೇಹವನ್ನು ಹೊರತೆಗೆಯಲಾಗಿದ್ದು, ಯಾವುದೇ ದುಷ್ಕ್ರತ್ಯ ನಡೆದ ಬಗ್ಗೆ ಸಾಕ್ಷಾಧಾರಗಳು ಲಭಿಸಿಲ್ಲ ಎಂದು ಹೇಳಿದ್ದಾರೆ.

47 ವರ್ಷ ವಯಸ್ಸಿನ ಮೋಟ್ವಾನಿಗೆ ಈಜುವುದು ಗೊತ್ತಿರಲಿಲ್ಲ. ಆದರೆ ಈಜು ಕಲಿಯಲು ಬಯಸಿದ್ದರು . ಮೂರು ವರ್ಷಗಳ ಹಿಂದೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಅರ್ಥರ್‌ಟನ್ ನಿವಾಸದಲ್ಲಿ ವಾಸವಾಗಿದ್ದರು ಎಂದು ಮೋಟ್ವಾನಿ ಗೆಳೆಯರನ್ನು ಸಂದರ್ಶಿಸಿದ ಮರ್‌ಕ್ಯೂರಿ ನ್ಯೂಸ್ ಪತ್ರಿಕೆ ವರದಿ ಮಾಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈರುಳ್ಳಿ ಬೆಲೆ ಏರಿಕೆ ಸಾಧ್ಯತೆ?
ಫಾರೆಕ್ಸ್ : ರೂಪಾಯಿ ಮೌಲ್ಯ ಕುಸಿತ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು: ನೂತನ ಜಿಎಂ
ವೇದಾಂತಾ ಅಲ್ಯೂಮಿನಿಯಂ‌ನಿಂದ 25 ಸಾ. ಕೋಟಿ ಹೂಡಿಕೆ
ಹೂಡಿಕೆಗೆ ಭಾರತ ತುರಕ್ಷಿತ ತಾಣ:ಕೆ.ವಿ.ಕಾಮತ್
ಇನ್ಫೋಸಿಸ್‌ಗೆ ಜನೆವರಿಯಿಂದ ನೇಮಕಾತಿ