ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯುಎಸ್‌ಐಬಿಸಿ: ಪ್ರೇಮ್‌ಜಿ, ಅನಿಲ್ ಅಂಬಾನಿಗೆ ಪುರಸ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಎಸ್‌ಐಬಿಸಿ: ಪ್ರೇಮ್‌ಜಿ, ಅನಿಲ್ ಅಂಬಾನಿಗೆ ಪುರಸ್ಕಾರ
ಭಾರತದ ಖ್ಯಾತ ಉದ್ಯಮಿಗಳಾದ ಅಜೀಂ ಪ್ರೇಮ್‌ಜಿ ಮತ್ತು ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿಯವರನ್ನು ಯುಎಸ್‌ಇಂಡಿಯಾ ಬಿಜಿನೆಸ್ ಕೌನ್ಸಿಲ್‌ನ ಜೂನ್ 17 ರಂದು ನಡೆಯಲಿರುವ 34ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಪೋರೇಟ್ ಕ್ಷೇತ್ರದಲ್ಲಿ ಅವಿಸ್ಮರಣಿಯ ಸಾಧನೆ ಮಾಡಿದ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪೆನಿಯಾದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿಯವರಿಗೆ ಗ್ಲೋಬಲ್ ವಿಜನ್ ಪ್ರಶಸ್ತಿ ಮತ್ತು ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್‌ನ ಅನಿಲ್ ಅಂಬಾನಿಯವರಿಗೆ ಗ್ಲೋಬಲ್ ಲೀಡರ್‌ಷಿಪ್ ನೀಡಿ ಗೌರವಿಸಲಿದೆ.

ನ್ಯೂಯಾರ್ಕ್ ಲೈಫ್ ಕಂಪೆನಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆರ್ನ್‌ಬರ್ಗ್‌ ಅವರಿಗೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಜಿನೆಸ್ ಎಕ್ಸ್‌ಲೆನ್ಸ್ ಪ್ರಶಸ್ತಿ ನೀಡಲಾಗುವುದು ಎಂದು ಯುಎಸ್‌ಐಬಿಸಿ ತಿಳಿಸಿದೆ.

ಯುಎಸ್‌ಐಬಿಸಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 310 ಅಮೆರಿಕನ್ ಕಂಪೆನಿಗಳನ್ನು ಪ್ರತಿನಿಧಿಸುತ್ತಿದ್ದು, ಅದರಲ್ಲಿ 220 ಕಂಪೆನಿಗಳು ಫಾರ್ಚ್ಯೂನ್‌-500 ಪಟ್ಟಿಯಲ್ಲಿ ಸ್ಥಾನಪಡೆದಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜೀವ್ ಮೋಟ್ವಾನಿ ಸಾವು ಪೊಲೀಸರಿಂದ ತನಿಖೆ
ಈರುಳ್ಳಿ ಬೆಲೆ ಏರಿಕೆ ಸಾಧ್ಯತೆ?
ಫಾರೆಕ್ಸ್ : ರೂಪಾಯಿ ಮೌಲ್ಯ ಕುಸಿತ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು: ನೂತನ ಜಿಎಂ
ವೇದಾಂತಾ ಅಲ್ಯೂಮಿನಿಯಂ‌ನಿಂದ 25 ಸಾ. ಕೋಟಿ ಹೂಡಿಕೆ
ಹೂಡಿಕೆಗೆ ಭಾರತ ತುರಕ್ಷಿತ ತಾಣ:ಕೆ.ವಿ.ಕಾಮತ್