ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜವಳಿ ರಫ್ತು ವಹಿವಾಟಿನಲ್ಲಿ ಶೇ.2 ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜವಳಿ ರಫ್ತು ವಹಿವಾಟಿನಲ್ಲಿ ಶೇ.2 ರಷ್ಟು ಕುಸಿತ
ಜಾಗತಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ಅಮೆರಿಕ ,ಯುರೋಪ್‌ ರಾಷ್ಟ್ರಗಳ ಜವಳಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ , 2008-09ರ ಆರ್ಥಿಕ ಸಾಲಿನ ಭಾರತದ ಜವಳಿ ರಫ್ತುವಹಿವಾಟಿನಲ್ಲಿ ಶೇ.2 ರಷ್ಟು ಕುಸಿತವಾಗಿ 21.75 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ಜವಳಿ ರಫ್ತುವಹಿವಾಟಿನಲ್ಲಿ ಕುಸಿತವಾಗಿದೆ ಎಂದು ಜವಳಿ ಸಚಿವಾಲಯದ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ಆರ್ಥಿಕ ವರ್ಷದ ಆರಂಭಿಕ ಆರು ತಿಂಗಳಲ್ಲಿ ಜವಳಿ ರಫ್ತು ವಹಿವಾಟಿನಲ್ಲಿ ಏರಿಕೆಯಾಗಿತ್ತು. ಆದರೆ ಅಕ್ಟೋಬರ್ ನಂತರ ಆರ್ಥಿಕ ವರ್ಷಾಂತ್ಯದವರೆಗೆ ನಿರಂತರವಾಗಿ ಇಳಿಕೆ ಕಂಡು ಒಟ್ಟು ಶೇ.1.7ರಷ್ಟು ಕುಸಿತ ಕಂಡಿತ್ತು.

ಜವಳಿ ರಫ್ತು ವಿಭಾಗದಲ್ಲಿ ಹ್ಯಾಂಡಿಕ್ರಾಫ್ಟ್‌ 2008-09ರ ಆರ್ಥಿಕ ಸಾಲಿನಲ್ಲಿ ಶೇ.48 ರಷ್ಟು ಕುಸಿತ ಕಂಡಿದೆ. ಹತ್ತಿ ನೂಲು , ಸೆಣಬು ಉತ್ಪಾದನೆ ರಫ್ತುಗಳಲ್ಲಿ ಕ್ರಮವಾಗಿ ಶೇ.11.8 ಮತ್ತು ಶೇ.9.5 ರಷ್ಟು ಕುಸಿತ ಕಂಡಿವೆ.

ಆದರೆ , ಹಿಂದಿನ ವರ್ಷದ ಆರ್ಥಿಕ ಸಾಲಿನಲ್ಲಿ ಗಾರ್ಮೆಂಟ್‌ ಕ್ಷೇತ್ರ ಮಾತ್ರ ಶೇ.4.6 ರಷ್ಟು ಏರಿಕೆ ಕಂಡು 10.13 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಅಮೆರಿಕ ,ಯುರೋಪ್ ರಾಷ್ಟ್ರಗಳಲ್ಲಿ ಆರ್ಥಿಕತೆ ಸುಸ್ಥಿತಿಗೆ ಮರಳಿದಲ್ಲಿ ದೇಶದ ಜವಳಿ ರಫ್ತು ವಹಿವಾಟಿನಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಜವಳಿ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುಎಸ್‌ಐಬಿಸಿ: ಪ್ರೇಮ್‌ಜಿ, ಅನಿಲ್ ಅಂಬಾನಿಗೆ ಪುರಸ್ಕಾರ
ರಾಜೀವ್ ಮೋಟ್ವಾನಿ ಸಾವು ಪೊಲೀಸರಿಂದ ತನಿಖೆ
ಈರುಳ್ಳಿ ಬೆಲೆ ಏರಿಕೆ ಸಾಧ್ಯತೆ?
ಫಾರೆಕ್ಸ್ : ರೂಪಾಯಿ ಮೌಲ್ಯ ಕುಸಿತ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು: ನೂತನ ಜಿಎಂ
ವೇದಾಂತಾ ಅಲ್ಯೂಮಿನಿಯಂ‌ನಿಂದ 25 ಸಾ. ಕೋಟಿ ಹೂಡಿಕೆ