ದೇಶಿಯ ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಸತತ ನಾಲ್ಕನೇ ತಿಂಗಳು ಕೂಡಾ ಏರಿಕೆ ಕಂಡಿದ್ದು, ಮೇ ತಿಂಗಳಲ್ಲಿ ಶೇ.2.48 ರಷ್ಟು ಹೆಚ್ಚಳವಾಗಿದೆ. ಆದರೆ ಸರಕಾರದ ಮತ್ತಷ್ಟು ಬೆಂಬಲ ದೊರೆಯದಿದ್ದಲ್ಲಿ ವಹಿವಾಟಿನಲ್ಲಿ ಕುಸಿತವಾಗುವ ಸಾಧ್ಯತೆಗಳಿವೆ ಎಂದು ಕೈಗಾರಿಕೋದ್ಯಮ ಸಂಘ ಸಿಯಾಮ್ ತಿಳಿಸಿದೆ.
ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಮ್) ಪ್ರಕಾರ, ಕಳೆದ ವರ್ಷದಲ್ಲಿ 1,10,745 ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಮೇ ತಿಂಗಳಲ್ಲಿ 1,13,490 ದೇಶಿಯ ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕೂಡಾ ಕಳೆದ ವರ್ಷದಲ್ಲಿ 6,47,358 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದು , ಪ್ರಸಕ್ತ ವರ್ಷದಲ್ಲಿ ಶೇ.12.45 ರಷ್ಟು ಏರಿಕೆಯಾಗಿ 7,27,937 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಸಿಯಾಮ್ ತಿಳಿಸಿದೆ.
ವಾಹನೋದ್ಯಮ ಚೇತರಿಸಿಕೊಂಡಿದ್ದು, ಕೇಂದ್ರ ಸರಕಾರದಿಂದ ಹೆಚ್ಚುವರಿ ಬೆಂಬಲ ದೊರೆಯದಿದ್ದಲ್ಲಿ ಯು ಟರ್ನ್ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಸಿಯಾಮ್ ಆತಂಕ ವ್ಯಕ್ತಪಡಿಸಿದೆ. |