ತೈಲ ಬೆಲೆ ಹೆಚ್ಚಳಗೊಳಿಸುವ ಮೊದಲು ಯುಪಿಎ ಸರಕಾರ ತನ್ನ ಅಂಗಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗೂ ರೈಲ್ವೆ ಸಚಿವೆ ಆದ ಮಮತಾ ಬ್ಯಾನರ್ಜಿ ಅವರು ಎಚ್ಚರಿಸಿದ್ದಾರೆ. ತೈಲೆ ಬೆಲೆ ಹೆಚ್ಚಳಗೊಳಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಮತಾ ಅವರು ಚುನಾವಣಾ ಪೂರ್ವ ಮೂರು ಬಾರಿ ತೈಲಬೆಲೆ ಕಡಿತಗೊಳಿಸಿದ್ದ ಯುಪಿಎ ಸರಕಾರ ಮತ್ತೆ ಅಧಿಕಾರಕ್ಕೇರಿದ ಕೂಡಲೇ ಬೆಲೆ ಹೆಚ್ಚಿಸುವುದು ಸಮಂಜಸವಲ್ಲ ಎಂದು ಹೇಳಿದರು. |