ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆಪಲ್ ಐಫೋನ್ ದರ ಕೇವಲ 5000 ರೂ.
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಪಲ್ ಐಫೋನ್ ದರ ಕೇವಲ 5000 ರೂ.
PTI
ಜಾಗತಿಕ ಆರ್ಥಿಕ ಕುಸಿತದ ನಂತರ ಪ್ರಥಮ ಬಾರಿಗೆ ಆಪಲ್ ಕಂಪೆನಿ, ಐಫೋನ್ ಮತ್ತು ಲ್ಯಾಪ್‌ಟಾಪ್‌ಗಳ ಮೇಲಿನ ದರವನ್ನು ಕಡಿತಗೊಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಐಫೋನ್‌ಗಳ ದರವನ್ನು 99 ಡಾಲರ್‌ಗಳಿಗೆ ಇಳಿಕೆ ಮಾಡಿದ್ದು, ಲ್ಯಾಪ್‌ಟಾಪ್‌ ದರವನ್ನು 300 ಡಾಲರ್‌ಗಳಿಗೆ ಇಳಿಕೆ ಮಾಡಿದೆ.

ಸಾಫ್ಟ್‌ವೇರ್ ಡೆವಲೆಪರ್ಸ್ ವಾರ್ಷಿಕ ಸಮ್ಮೆಳನದಲ್ಲಿ ನೂತನ ಮಾಡೆಲ್‌ನ 3ಜಿ (ಎಸ್) ಐಫೋನ್ ಬಿಡುಗಡೆ ಮಾಡಿದ್ದು, ನೋಡಲು ಇತರ ಐಫೋನ್ ಮಾದರಿಗಳಂತೆ ಇದ್ದು, ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಟರಿ ಬಾಳಿಕೆಯಲ್ಲಿ ಹೆಚ್ಚಳ , ಆಂತರಿಕ ದಿಕ್ಸೂಚಿ ,ವೀಡಿಯೋ ಕ್ಯಾಮರಾ ಮತ್ತು ಫೋಟೋ ಕ್ಯಾಮರಾ ಉತ್ತಮ ರೆಸಲ್ಯೂಶನ್ ಹಾಗೂ ಅಟೋ ಫೋಕಸ್ ಸೌಲಭ್ಯ ಹೊಂದಿವೆ ಎಂದು ಆಪಲ್ ಕಂಪೆನಿ ತಿಳಿಸಿದೆ.

16-ಗಿಗಾಬೈಟ್ ಆವೃತ್ತಿಯ 3ಜಿ- ಎಸ್, ಐಫೋನ್‌ಗೆ 199 ಡಾಲರ್‌ ದರವನ್ನು ನಿಗದಿಪಡಿಸಿದ್ದು, ಮತ್ತು 32 ಗಿಗಾಬೈಟ್‌ನ ಮಾಡೆಲ್‌ಗೆ 299 ಡಾಲರ್‌ ದರವನ್ನು ನಿಗದಿಪಡಿಸಲಾಗಿದೆ.

8 ಜಿಬಿ ಐಫೋನ್ 3ಜಿ ಕಳೆದ ವರ್ಷ ಮಾರುಕಟ್ಟೆಗೆ ಬಂದಿದ್ದು, ಆರಂಭದಲ್ಲಿ 199 ಡಾಲರ್‌ಗಳನ್ನು ನಿಗದಿಪಡಿಸಲಾಗಿದ್ದು, ಇದೀಗ ಕೇವಲ 99 ಡಾಲರ್‌ಗಳಿಗೆ ಐಫೋನ್ ದೊರೆಯಲಿದೆ. ಎರಡು ವರ್ಷಗಳ ಹಿಂದೆ ಐಫೋನ್ ಮಾರುಕಟ್ಟೆಗೆ ಬಂದಾಗ 4ಜಿಬಿ ಐಫೋನ್‌ಗೆ 499 ಡಾಲರ್ ಮತ್ತು 8ಜಿಬಿ ಐಫೋನ್‌ಗೆ 599 ಡಾಲರ್‌ಗಳಿಗೆ ಮಾರಾಟ ಮಾಡಲು ಆಪಲ್ ಕಂಪೆನಿ ನಿರ್ಧರಿಸಿತ್ತು.

ನೂತನ ಮಾಡೆಲ್‌ನ 3ಜಿ (ಎಸ್) ಐಫೋನ್ ಜೂನ್ 19ಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಆಪಲ್ ಐಫೋನ್ ತಯಾರಿಕೆ ಕಂಪೆನಿ, ರಿಸರ್ಚ್‌ ಇನ್‌ ಮೊಶನ್ ಮತ್ತು ಪಾಮ್ ಕಂಪೆನಿಗಳಿಂದ ತೀವ್ರತೆರನಾದ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಪಾಮ್ ಕಂಪೆನಿ 200 ಡಾಲರ್‌ಗಳ ದರದ ಐಫೋನ್ ರೈವಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ:ಫೆಬ್ರವರಿ ತಿಂಗಳಾಂತ್ಯಕ್ಕೆ 52ಕೋಟಿ ಲಾಭ
ಫಾರೆಕ್ಸ್ : ರೂಪಾಯಿ ಮೌಲ್ಯದಲ್ಲಿ ಕುಸಿತ
ಬೆಂಗಳೂರಿಗೆ ಸಾರಸ್ವತ್ ಬ್ಯಾಂಕ್ ಶಾಖೆ
ಅಂಗಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಮಮತಾ
ಆರ್ಥಿಕ ಕುಸಿತ: ವಿಮಾನ ಸಂಸ್ಥೆಗಳಿಗೆ 8 ಬಿಲಿಯನ್ ಡಾಲರ್ ನಷ್ಟ
ಬಜೆಟ್‌ನಲ್ಲಿ ಸೌಕರ್ಯ,ಸುರಕ್ಷತೆಗೆ ಆದ್ಯತೆ: ಮಮತಾ