ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಸತ್ಯಂ ಕಂಪ್ಯೂಟರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಸತ್ಯಂ ಕಂಪ್ಯೂಟರ್
PTI
ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜು ಎಸಗಿದ ವಂಚನೆ ಬಹಿರಂಗವಾದ ನಂತರ ಮೂರು ತಿಂಗಳ ಅವಧಿಯಲ್ಲಿ 23 ಗ್ರಾಹಕರು ಕಂಪೆನಿಯಿಂದ ದೂರವಾಗಿದ್ದಾರೆ. ಆದರೆ 215 ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಎಂದು ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ ಮೂಲಗಳು ತಿಳಿಸಿವೆ.

ಅದನ್ನು ಹೊರತುಪಡಿಸಿ 43 ಗ್ರಾಹಕರು ಭಾಗಾಂಶ ಅಥವಾ ಸಂಪೂರ್ಣವಾಗಿ ಸತ್ಯಂನಿಂದ ದೂರವಾಗಿದ್ದು, ದೂರವಾದ ಕಂಪೆನಿಗಳು ಸೇವಾಒಪ್ಪಂದವನ್ನು ಹಿಂತೆಗೆದುಕೊಂಡಿಲ್ಲ ಎಂದು ಸತ್ಯಂ ಅದಿಕಾರಿಗಳು ತಿಳಿಸಿದ್ದಾರೆ.

ಸತ್ಯಂನಿಂದ ದೂರವಾದ 23 ಗ್ರಾಹಕ ಕಂಪೆನಿಗಳು ಡಿಸೆಂಬರ್ 31,2008ರಲ್ಲಿ 70 ಮಿಲಿಯನ್ ಡಾಲರ್‌ಗಳ ವಹಿವಾಟು ನೀಡಿದ್ದವು. ಆದರೆ ನೂತನವಾಗಿ ಸೇರ್ಪಡೆಗೊಂಡ 215 ಗ್ರಾಹಕರು ಒಟ್ಟು 380 ಮಿಲಿಯನ್ ಡಾಲರ್‌ಗಳ ವಹಿವಾಟು ನೀಡಿವೆ ಎಂದು ಸತ್ಯಂ ಮೂಲಗಳು ತಿಳಿಸಿವೆ.

ಸತ್ಯಂ ಸಂಸ್ಥೆ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವಂತೆ ಟೆಕ್ ಮಹೀಂದ್ರಾ ಕಂಪೆನಿ ಸತ್ಯಂ ಕಂಪೆನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿತು. ಆದರೂ ಗ್ರಾಹಕರನ್ನು ಸೆಳೆಯವಲ್ಲಿ ವಿಫಲವಾಗಿದೆ ಎಂದು ಸತ್ಯಂ ಅದಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಮಾನನಿಲ್ದಾಣ ಅಭಿವೃದ್ಧಿ ಶುಲ್ಕ ಹೊರೆ:ಐಎಟಿಎ
ದೇಶದ ಜಿಡಿಪಿ ದರ ಶೇ.8-9ಕ್ಕೆ ತಲುಪುವ ಸಾಧ್ಯತೆ:ಪ್ರಧಾನಿ
ಆರ್ಥಿಕ ಕುಸಿತದ ವೇಗ ಕುಂಠಿತ:ಶ್ವೇತ ಭವನ
ಆಪಲ್ ಐಫೋನ್ ದರ ಕೇವಲ 5000 ರೂ.
ಸತ್ಯಂ:ಫೆಬ್ರವರಿ ತಿಂಗಳಾಂತ್ಯಕ್ಕೆ 52ಕೋಟಿ ಲಾಭ
ಫಾರೆಕ್ಸ್ : ರೂಪಾಯಿ ಮೌಲ್ಯದಲ್ಲಿ ಕುಸಿತ