ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರಸ್ತುತ ದರದಲ್ಲೂ ಚಿನ್ನ ಖರೀದಿಗೆ ಹೂಡಿಕೆದಾರರ ಆಸಕ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಸ್ತುತ ದರದಲ್ಲೂ ಚಿನ್ನ ಖರೀದಿಗೆ ಹೂಡಿಕೆದಾರರ ಆಸಕ್ತಿ
PTI
ಭಾರತದಲ್ಲಿ ಶೇ.74 ರಷ್ಟು ಹೂಡಿಕೆದಾರರು ಪ್ರಸಕ್ತ ದರದಲ್ಲಿ ಚಿನ್ನ ಹಾಗೂ ಆಭರಣಗಳನ್ನು ಖರೀದಿಸಲು ಆಸಕ್ತಿಯನ್ನು ಹೊಂದಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ಪ್ರಕಟಿಸಿದೆ.

ಪ್ರಸ್ತುತ ಚಿನ್ನದ ದರ ಪ್ರತಿ 10 ಗ್ರಾಂಗೆ 14,700 ರೂ ಮತ್ತು ಆಭರಣ ಚಿನ್ನದ ದರ ಪ್ರತಿ 10 ಗ್ರಾಂಗೆ 15,100 ರೂಪಾಯಿಗಳಾಗಿವೆ.

ಪ್ರಸಕ್ತ ದರದಲ್ಲಿ ಚಿನ್ನ ಖರೀದಿಸಲು ಬಯಸುವ ಹೂಡಿಕೆದಾರರು ಆಭರಣಗಳನ್ನು ಖರೀದಿಸಲು ಇಷ್ಟಪಡುತ್ತಾರೆ ಎಂದು ಸಮೀಕ್ಷಾ ಸಂಸ್ಥೆ ಇಂಡಿಯಾ ಇನ್ಫೋಲೈನ್ ಲಿಮಿಟೆಡ್ ಅಧ್ಯಯನದ ವರದಿಯಲ್ಲಿ ತಿಳಿಸಿದೆ.

ಸುಮಾರು ಶೇ.35 ರಷ್ಟು ಹೂಡಿಕೆದಾರರು ಆಭರಣಗಳನ್ನು ಖರೀದಿಸಲು ಆಸಕ್ತಿಯನ್ನು ಹೊಂದಿದ್ದಾರೆ. ಶೇ.27 ರಷ್ಟು ಹೂಡಿಕೆದಾರರು ಚಿನ್ನವನ್ನು ಖರೀದಿಸಲು ಆಸಕ್ತಿಯನ್ನು ಹೊಂದಿದ್ದು, ಶೇ.12 ರಷ್ಟು ಹೂಡಿಕೆದಾರರು ಚಿನ್ನದ ನಾಣ್ಯಗಳನ್ನು ಖರೀದಿಸಲು ಬಯಸುತ್ತಾರೆ ಎಂದು ತಿಳಿಸಿದೆ.

ಆಸಕ್ತಿಕರ ವಿಷಯವೆಂದರೆ, ಚಿನ್ನದ ನಾಣ್ಯಗಳನ್ನು ಖರೀದಿಸುವ ಶೇ.60 ರಷ್ಟು ಹೂಡಿಕೆದಾರರು ಮುಂಬರುವ ಭವಿಷ್ಯದ ದಿನಗಳಲ್ಲಿ ಆಭರಣಗಳಾಗಿ ಪರಿವರ್ತಿಸಲು ಬಯಸುತ್ತಾರೆ ಎಂದು ಸಮೀಕ್ಷಾ ಸಂಸ್ಥೆ ಪ್ರಕಟಿಸಿದ ಅಧ್ಯಯನದ ವರದಿಯಲ್ಲಿ ತಿಳಿಸಿದೆ.

ಪ್ರಸ್ತುತ ಚಿನ್ನದ ದರ ಗಗನಕ್ಕೇರಿದರೂ ಚಿನ್ನದ ಮೇಲಿನ ವ್ಯಾಮೋಹ ಕೂಡಾ ಪ್ರಬಲವಾಗುತ್ತಿದೆ. ಚಿನ್ನದ ದರ ಇಳಿಕೆಯಾಗುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಇಂಡಿಯಾ ಇನ್ಫೋಲೈನ್ ಲಿಮಿಟೆಡ್, 167 ನಗರಗಳ 23 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ದಪಡಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಸತ್ಯಂ ಕಂಪ್ಯೂಟರ್
ವಿಮಾನನಿಲ್ದಾಣ ಅಭಿವೃದ್ಧಿ ಶುಲ್ಕ ಹೊರೆ:ಐಎಟಿಎ
ದೇಶದ ಜಿಡಿಪಿ ದರ ಶೇ.8-9ಕ್ಕೆ ತಲುಪುವ ಸಾಧ್ಯತೆ:ಪ್ರಧಾನಿ
ಆರ್ಥಿಕ ಕುಸಿತದ ವೇಗ ಕುಂಠಿತ:ಶ್ವೇತ ಭವನ
ಆಪಲ್ ಐಫೋನ್ ದರ ಕೇವಲ 5000 ರೂ.
ಸತ್ಯಂ:ಫೆಬ್ರವರಿ ತಿಂಗಳಾಂತ್ಯಕ್ಕೆ 52ಕೋಟಿ ಲಾಭ