ಇಂದಿನಿಂದ ಫಿಲ್ಟರ್ ಕಾಫಿ ಪುಡಿ ಬೆಲೆಯನ್ನು ಹೆಚ್ಚಳಗೊಳಿಸಲು ಕಾಫಿ ಸಂಸ್ಕರಣೆಗಾರರ ಸಂಘ ನಿರ್ಧಾರ ಕೈಗೊಂಡಿದೆ. ಕಾಫಿ ಬೀಜಗಳಲ್ಲಿನ ಉತ್ಪಾದನೆ ಕೊರತೆ ಹಾಗೂ ಕಾಫಿ ಬೀಜಗಳ ಬೆಲೆ ಭಾರೀ ಹೆಚ್ಚಳಗೊಂಡಿದ್ದರ ಹಿನ್ನಲೆಯಲ್ಲಿ ಫಿಲ್ಟರ್ ಕಾಫಿ ಪುಡಿ ಬೆಲೆ ಹೆಚ್ಚಳಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. |