ಜಾಗತಿಕವಾಗಿ ಕಂಗೆಡಿಸಿರುವ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಶೀಲ ದೇಶಗಳ ರಫ್ತು ಘಟಕದಿಂದ ಅಂದಾಜು 1.3ಮಿಲಿಯನ್ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಯುಎನ್‌ಸಿಟಿಎಡಿ ವರದಿ ಶುಕ್ರವಾರ ತಿಳಿಸಿದೆ.
ರಫ್ತು ಸೆಕ್ಟರ್‌ನಿಂದ ಅಂದಾಜು 7.48ಲಕ್ಷ ಜನರ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದ್ದು, ಕೆಲವು ಸೆಕ್ಟರ್‌ಗಳಲ್ಲಿ ಧನಾತ್ಮಕ ಬೆಳವಣಿಗೆ ಕಂಡುಬರಲಿದೆ ಎಂದು ಅಧ್ಯಯನ ವರದಿ ವಿವರಿಸಿದೆ. 2009-10ರಲ್ಲಿ ಭಾರತದ ಒಟ್ಟು ರಫ್ತು ವಹಿವಾಟಿನಲ್ಲಿ ಶೇ.2.2ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಹೇಳಿದೆ.
ಅಲ್ಲದೇ 2010-11ರಲ್ಲಿ 5.22ಮಿಲಿಯನ್ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ವರದಿ, ಯಾವ ಸೆಕ್ಟರ್‌ನಲ್ಲಿಯೂ ಉದ್ಯೋಗ ಕಡಿತವಾಗುವ ಭಯ ಕಡಿಮೆಯಾಗಲಿದೆ ಎಂದು ಭರವಸೆ ನೀಡಿದೆ. 2008-09ರಲ್ಲಿ ಟೆಕ್ಸ್‌ಟೈಲ್ ಸೆಕ್ಟರ್‌ನಲ್ಲಿ ಸುಮಾರು 1.16ಮಿಲಿಯನ್ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. |