ಆರ್ಥಿಕ ಹಿಂಜರಿತದ ನಡುವೆಯೂ ದೇಶದ ಕೈಗಾರಿಕಾ ಉತ್ಪಾದನೆ ಏಪ್ರಿಲ್ ತಿಂಗಳಿನಲ್ಲಿ ಶೇ.1.4ರಷ್ಟು ಹೆಚ್ಚಳ ಕಂಡಿದೆ. ಆರ್ಥಿಕ ಚೇತರಿಕೆಯ ಮೊದಲ ಲಕ್ಷಣ ಇದಾಗಿರಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ.
ಆದರೆ ಸಂಸ್ಕರಿಸಿದ ಆಹಾರ ವಸ್ತುಗಳು ಹಾಗೂ ದೀರ್ಘಕಾಲ ಬಾಳಿಕೆ ಬಾರದ ವಸ್ತುಗಳು ಸೇರಿದಂತೆ ಬಂಡವಾಳ ಸರಕು ವಲಯ ಹಿನ್ನಡೆ ಅನುಭವಸಿದೆ. ಆದರೆ ಆಶ್ಚರ್ಯ ಎನ್ನುವಂತೆ ವಿದ್ಯುತ್ ಉತ್ಪಾದನೆ ಶೇ.7.1ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ವಿದ್ಯುತ್ ಉತ್ಪಾದನೆ ಶೇ.1.4ರಷ್ಟು ಕಡಿಮೆ ಇತ್ತು.
ಕೈಗಾರಿಕಾ ಉತ್ಪಾದನೆಯ ಈ ಏಪ್ರಿಲ್ ಬೆಳವಣಿಗೆ ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಕಡಿಮೆಯೇ ಆಗಿದೆ. ಕಳೆದ ವರ್ಷ ಶೇ.6.2ರಷ್ಟು ಕೈಗಾರಿಕಾ ಉತ್ಪನ್ನ ಬೆಳವಣಿಗೆ ಕಂಡಿತ್ತು.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಿಂದ ಕೈಗಾರಿಕಾ ಉತ್ಪನ್ನ ಇಳಿಮುಖವಾಗಿತ್ತು. ಮುಖ್ಯವಾಗಿ ವಿಶ್ವದೆಲ್ಲೆಡೆ ಕಂಡುಬಂದ ಆರ್ಥಿಕ ಹಿಂಜರಿತ ಇದಕ್ಕೆ ಕಾರಣ. ಇದೇ ಅವಧಿಯಲ್ಲಿ ಲೀಮನ್ ಬ್ರದರ್ಸ್ ಕಂಪೆನಿ ದಿವಾಳಿ ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. |