ಮಾತೃಸಂಸ್ಥೆಯೊಂದಿಗೆ ವಿಲೀನ ಪ್ರಕ್ರಿಯನ್ನು ವಿರೋಧಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರು ಸಹವರ್ತಿ ಬ್ಯಾಂಕ್ ನೌಕರರು ಜುಲೈ 3ರಂದು ಬಂದ್‌ಗೆ ಕರೆ ನೀಡಿದ್ದಾರೆ.
ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ (ಎಐಬಿಒಎ) ಮತ್ತು ಸ್ಟೇಟ್ ಸೆಕ್ಟರ್ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್(ಎಸ್‌ಎಸ್‌ಬಿಇಎ) ಜಂಟಿಯಾಗಿ ಒಂದು ದಿನದ ಮುಷ್ಕರಕ್ಕೆ ಕರೆ ಕೊಟ್ಟಿದೆ.
ವಿಲೀನ ಪ್ರಕ್ರಿಯೆಯನ್ನು ವಿರೋಧಿಸುವಂತೆ ಸುಮಾರು ಆರು ಬ್ಯಾಂಕ್‌ಗಳ 75ಸಾವಿರ ಮಂದಿ ಅಧಿಕಾರಿಗಳು ಮತ್ತು ನೌಕರರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳುಂತೆ ಕರೆ ನೀಡಿರುವುದಾಗಿ ಎಐಬಿಒಎ ಅಧ್ಯಕ್ಷ ಅಲೋಕ್ ಖಾರೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಅಸೋಸಿಯೇಟ್ಸ್ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್, ಸ್ಟೇಟ್ ಬ್ಯಾಂಕ್ ಆಫ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಅನ್ನು ವಿಲೀನಗೊಳಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ಮಂಡಳಿ ನೂತನ ಸರ್ಕಾರ ಯುಪಿಎ ಮೇಲೆ ಒತ್ತಡ ಹೇರುತ್ತಿದೆ.
ವಿಲೀನ ಪ್ರಕ್ರಿಯೆಗೆ ಮುಂದುವರಿಯಲು ನೂತನ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಎಸ್‌ಬಿಐ ಚೇಯರ್‌ಮೆನ್ ಒ.ಪಿ.ಭಟ್ ತಿಳಿಸಿರುವುದಾಗಿ ಖಾರೆ ಹೇಳಿದರು.
ಅಸೋಸಿಯೇಟ್ಸ್ ಬ್ಯಾಂಕ್‌ನ ವಿಲೀನ ಪ್ರಕ್ರಿಯೆಯಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಸಾಕಷ್ಟು ಹೊಡೆತ ಬೀಳಲಿದೆ ಎಂದು ಖಾರೆ ವಿವರಿಸಿದರು. |