ವಾಣಿಜ್ಯ ನಗರಿಯಲ್ಲಿನ ಅತ್ಯಂತ ಹಳೆಯ ಫೈವ್ ಸ್ಟಾರ್ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 'ಸೀ ರಾಕ್' ಅನ್ನು ಪ್ರತಿಷ್ಠಿತ ತಾಜ್ ಗ್ರೂಪ್ ಆಫ್ ಹೋಟೆಲ್ಸ್ ಸುಮಾರು 680ಕೋಟಿ (143ಮಿಲಿಯನ್ ಡಾಲರ್) ರೂ.ಗೆ ಖರೀದಿಸಿದೆ.
ಎಲೆಲ್(ಇಎಲ್‌ಇಎಲ್) ಹೋಟೆಲ್ಸ್ ಮತ್ತು ಇನ್ವೆಸ್ಟ್‌ಮೆಂಟ್ಸ್ ಅನ್ನು ಶೇ.85ರಷ್ಟು ತೆಕ್ಕೆಗೆ ತೆಗೆದುಕೊಂಡಿರುವುದಾಗಿ ಟಾಟಾ ಒಡೆತನದ ತಾಜ್ ಗ್ರೂಪ್ ಶುಕ್ರವಾರ ತಡರಾತ್ರಿ ಘೋಷಿಸಿದ್ದು, ಇದು ಸೀ ರಾಕ್ ಹೊಟೇಲ್ ಆಸ್ತಿಯಾಗಿದೆ ಎಂದು ಹೇಳಿದೆ.
ಮುಂಬೈಯಲ್ಲಿ ತಾಜ್ ಗ್ರೂಪ್‌ನ ಪ್ರಮುಖ ನಾಲ್ಕು ಹೋಟೆಲ್‌ಗಳಿವೆ, ಅವೆಲ್ಲವೂ ಅರಬ್ಬಿ ಸಮುದ್ರದ ದಡದ ಸಮೀಪವೇ ಇದೆ. ಅದರಲ್ಲಿ ಎರಡು ಪ್ರಮುಖ ಹೋಟೆಲ್‌ಗಳಲ್ಲಿ ಕಳೆದ ವರ್ಷ ನಡೆದ ಭಯೋತ್ಪಾದನಾ ದಾಳಿ ನಡೆದಿತ್ತು. ಅದೇ ರೀತಿ ಸೀ ರಾಕ್ ಹೋಟೆಲ್‌ನಲ್ಲೂ ಕೂಡ 1993ರ ಮಾರ್ಚ್ 12ರಂದು ಸರಣಿ ಬಾಂಬ್ ಸ್ಫೋಟ ಘಟನೆಗೆ ಸಾಕ್ಷಿಯಾಗಿತ್ತು.
480 ರೂಂಗಳನ್ನು ಹೊಂದಿರುವ ಬೃಹತ್ ಸೀ ರಾಕ್ ಹೊಟೇಲ್‌ನ್ನು ಒಡೆದು, ಪುನಃ ಅದೇ ಮಾದರಿಯಲ್ಲಿ ಸುಮಾರು 500ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಇಂಡಿಯನ್ ಹೋಟೆಲ್ಸ್ ಉಪಾಧ್ಯಕ್ಷ ಆರ್.ಕೆ.ಕೃಷ್ಣಾ ಕುಮಾರ್ ತಿಳಿಸಿದ್ದಾರೆ.
|