ಒಂದು ವರ್ಷದಿಂದ ಎರಡು ವರ್ಷದವರೆಗಿನ ಠೇವಣಿ ಹಣಕ್ಕೆ ಶೇ.0.25ರಷ್ಟು ಬಡ್ಡಿದರವನ್ನು ಕಡಿತಗೊಳಿಸಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಠೇವಣಿ ದರವನ್ನು 6.50ರಿಂದ 6.25ಕ್ಕೆ ಕಡಿತ ಮಾಡುವುದಾಗಿ ಬ್ಯಾಂಕ್ ಹೇಳಿದೆ.
2 ವರ್ಷದಿಂದ ಸಾವಿರ ದಿನಗಳೊಳಗಿನ ಠೇವಣಿ ದರಕ್ಕೆ 7.50ರಿಂದ 7.25ಕ್ಕೆ, ಸಾವಿರ ದಿನದಿಂದ ಮೇಲ್ಪಟ್ಟ ಠೇವಣಿಗೆ 7.75ರಿಂದ 7.50ಕ್ಕೆ ಇಳಿಕೆ ಮಾಡಲಾಗಿದೆ. 3 ರಿಂದ ಐದು ವರ್ಷದೊಳಗಿನ ಠೇವಣಿ ದರವನ್ನು 7.50ರಿಂದ 7.25ಕ್ಕೆ ಇಳಿಕೆ ಅಲ್ಲದೇ, ಐದರಿಂದ ಎಂಟು ವರ್ಷದವರೆಗಿನ ಠೇವಣಿ ದರವನ್ನು ಶೇ.8ರಿಂದ 7.75ಕ್ಕೆ ಕಡಿತ ಮಾಡಿರುವುದಾಗಿ ಎಸ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಹಿರಿಯ ನಾಗರಿಕರಿಗೆ ಒಂದು ವರ್ಷದವರೆಗಿನ ಠೇವಣಿಗೆ ಶೇ.0.50ರಷ್ಟು ಹೆಚ್ಚಳ ಮಾಡಲಾಗಿದ್ದು, ಇದು ಒಂದು ಕೋಟಿ ರೂ. ವರೆಗೂ ಇದೇ ದರವನ್ನು ನೀಡಲಾಗುವುದು ಎಂದು ವಿವರಿಸಿದೆ. |