ಹೊಸ ಎಂಜಿನಿಯರುಗಳಿಗೆ ಪ್ರಸಕ್ತ ಸಾಲಿನಲ್ಲಿ ಉದ್ಯೋಗಾವಕಾಶ ಮಂಕಾಗಿದೆ ಎಂದು ರಾಷ್ಟ್ರದ ಎರಡು ದೈತ್ಯ ಐಟಿ ಕಂಪೆನಿಗಳ ಉನ್ನತ ಕಾರ್ಯಕಾರಿ ಅಭಿಪ್ರಾಯಪಟ್ಟಿದೆ.
ಈ ಹಣಕಾಸು ವರ್ಷದಲ್ಲಿ ಐಟಿ ಉದ್ಯಮದ ಬೆಳವಣಿಗೆ ಮಂಕಾಗಿದೆ ಎಂಬುದು ಇನ್‌ಪೊಸಿಸ್ ಸಿಇಓಎಸ್ ಗೋಪಾಲಕೃಷ್ಣನ್ ತಿಳಿಸಿದ್ದಾರೆ. ಹೊಸ ಪದವೀಧರರಿಗೆ ಉದ್ಯೋಗ ಅವಕಾಶಗಳು ತುಂಬಾ ಸೀಮಿತವಾಗಿವೆ. ಚೇತರಿಕೆ ಉಂಟಾಗಿ ಆರ್ಥಿಕ ಬೆಳವಣಿಗೆ ಮರುಕಳಿಸಿದ್ದೇ ಆದಲ್ಲಿ ಎಂಜಿನಿಯರ್ ಪದವೀಧರರರಿಗೆ ಬೇಡಿಕೆ ಮತ್ತೆ ಏರಲಿದೆ ಎಂದು ಹೇಳಿದರು.
ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ನಿರುದ್ಯೋಗಿ ಎಂಜಿನಿಯರ್‌ಗಳ ಪ್ರಮಾಣ ಹೆಚ್ಚಾದಂತೆ ವೇತನಗಳಲ್ಲಿ ಇಳಿಮುಖವಾಗುತ್ತದೆ ಎಂಬ ಅಭಿಪ್ರಾಯ ಮಂಡಿಸಿದರು. ಅಣ್ಣಾ ವಿಶ್ವವಿದ್ಯಾಲಯದ ಕುಲಪತಿ ಜೊತೆಗಿನ ತಮ್ಮ ಮಾತುಕತೆಯನ್ನು ನೆನಪಿಸಿಕೊಂಡ ಪ್ರೇಮ್‌ಜಿ, ಈ ವರ್ಷ ಪದವಿ ಪಡೆಯುವ ಅಪಾರ ಸಂಖ್ಯೆಯ ಎಂಜಿನಿಯರ್‌ಗಳಿಗೆ ಉದ್ಯೋಗಗಳು ಸಿಗದಿರುವ ಸಾಧ್ಯತೆಗಳಿವೆ ಎಂದರು.
ಭಾರತೀಯ ಕೈಗಾರಿಕಾ ಮಹಾಒಕ್ಕೂಟ(ಸಿಐಐ) ಏರ್ಪಡಿಸಿದ್ದ 5ನೇ ಭಾರತ ಹೊಸ ಕಲ್ಪನೆ ಸಮಾವೇಶದಲ್ಲಿ ಮಾತನಾಡಿ ಪ್ರಸಕ್ತ ವಿದ್ಯಮಾನಗಳ ಕುರಿತು ವಿವರಿಸಿದರು. |