ಭಾರ್ತಿ ಏರ್‌ಟೆಲ್‌ನ ಡಿಜಿಟಲ್ ಟಿವಿ ಇದೀಗ ತನ್ನ ಗ್ರಾಹಕರಿಗೆ ಮೂರು ವಿಶೇಷ ಪ್ಯಾಕೇಜ್‌ಗಳನ್ನು ಬಿಡುಗಡೆಗೊಳಿಸಿದೆ.
ತನ್ನ ನೂತನ ಗ್ರಾಹಕರಿಗೆ ಈ ಪ್ಯಾಕೇಜ್ ಮೂರು ಬೆಲೆಗಳಲ್ಲಿ ಲಭ್ಯವಿದ್ದು, 3,450ರೂ., 4350ರೂ. ಹಾಗೂ 5,540ರೂ.ಗೆ ಪಡೆಯಬಹುದಾಗಿದೆ ಎಂದು ಹೇಳಿದೆ.
ಹಾಲಿ ಗ್ರಾಹಕರಿಗೆ ಐದು ಪ್ರತ್ಯೇಕ ಬೆಲೆಯಲ್ಲಿ ಕಡಿಮೆಗೆ ಲಭ್ಯವಿದ್ದು, 1088 ರೂ.ನಿಂದ 3850ರೂ.ಗೆ ಲಭ್ಯ. ಕಳೆದ ಎಂಟು ತಿಂಗಳಿನಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅತ್ಯುತ್ತಮ ಸೇವೆ ಒದಗಿಸಲು ಹಾಗೂ ಕಲ್ಪನೆ ಮೂಡಿಸುವ ಉದ್ದೇಶ ನಮ್ಮದಾಗಿದೆ ಎಂದು ಭಾರ್ತಿ ಟೆಲಿಮೀಡಿಯಾದ ಉಪಾಧ್ಯಕ್ಷ ಸುಗುಟೊ ಬ್ಯಾನರ್ಜಿ ತಿಳಿಸಿದ್ದಾರೆ.
ಈ ಪ್ಯಾಕೇಜ್‌ಗಳು ದೇಶಾದ್ಯಂತ ತಮ್ಮ ಗ್ರಾಹಕರಿಗೆ ಸಮರ್ಥ ಬೆಲೆ ಕಟ್ಟುವ ಹಾಗೂ ತಿಂಗಳ ಶುಲ್ಕ ಪಾವತಿಸುವ ತೊಂದರೆಯಿಂದ ಪಾರಾಗಲು ಸಹಕಾರ ನೀಡಲಿದೆ ಎಂದು ಹೇಳಿದರು. |