ಆಂಧ್ರಪ್ರದೇಶದಲ್ಲಿ ಮೂರು ಆರ್ಥಿಕ ವಲಯಗಳನ್ನು ಪೂರ್ಣಗೊಳಿಸಲು ಸತ್ಯಂ ಕಂಪ್ಯೂಟರ್‌ಗೆ ಒಂದು ವರ್ಷ ವಿಸ್ತರಣೆಯನ್ನು ಸರ್ಕಾರ ನೀಡಿದ್ದು, ಐಟಿ ಸಂಸ್ಥೆಯ ನೂತನ ಆಡಳಿತಮಂಡಳಿಗೆ ತೋಳಿನ ಆಸರೆ ನೀಡಿದೆ. ಹೈದರಾಬಾದ್‌ನಲ್ಲಿ ಎರಡು ಐಟಿ ಮತ್ತು ಐಟಿಇಎಸ್ ವಿಶೇಷ ಆರ್ಥಿಕ ವಲಯಗಳಿಗೆ ಮತ್ತು ವಿಶಾಖಪಟ್ನಂನ ಥೋಟ್ಲಾಕೊಂಡದಲ್ಲಿರುವ ಒಂದು ಆರ್ಥಿಕ ವಲಯ ಮುಗಿಸಲು ಜೂನ್ 2010ರವರೆಗೆ ಕಾಲಾವಕಾಶ ವಿಸ್ತರಣೆ ಮಾಡಿದೆ.
ಎಲ್ಲ ಮೂರು ತೆರಿಗೆ ಮುಕ್ತ ವಲಯಗಳಿಗೆ ಔಪಚಾರಿಕ ಅನುಮೋದನೆ ನೀಡಿದ್ದು. ಈ ತಿಂಗಳಾಂತ್ಯದಲ್ಲಿ ಅವಧಿ ಮುಗಿಯಬೇಕಿತ್ತು. ಸಚಿವಾಲಯವು ಕಾಲಾವಕಾಶ ವಿಸ್ತರಣೆ ಮಾಡಿದ್ದರೂ ಅಂತರ ಸಚಿವ ಮಂಡಳಿಯ ಅನುಮೋದನೆ ಪಡೆಯಬೇಕಿದೆ.
ತನ್ನ ಎಸ್‌ಇಜಡ್ ಯೋಜನೆಗಳಿಗೆ ಸತ್ಯಂ 370 ಕೋಟಿ ರೂ. ಬಂಡವಾಳ ಹೂಡಿಕೆಗೆ ಯೋಜಿಸಿದೆ. ಸತ್ಯಂ ಕಂಪ್ಯೂಟರ್ ಪ್ರಮುಖ ಐಟಿ ಸಂಸ್ಥೆಯಾಗಿದ್ದು, ಸಂಸ್ಥಾಪಕ ರಾಮಲಿಂಗ ರಾಜು ಬಹುಕೋಟಿ ಮೌಲ್ಯದ ವಂಚನೆಯನ್ನು ಬಯಲುಮಾಡಿದ ಬಳಿಕ ತೀವ್ರ ನಗದುಕೊರತೆ ಎದುರಿಸಿತ್ತು. ಆದಾಗ್ಯೂ ಟೆಕ್ ಮಹೇಂದ್ರ ಬಹುತೇಕ ಷೇರುಗಳನ್ನು ಖರೀದಿಸಿದ್ದರಿಂದ ಕಂಪೆನಿ ಚೇತರಿಕೆಯ ಹಾದಿಯಲ್ಲಿದೆ. |