ದೇಶದ ಪ್ರಮುಖ 10 ಕಂಪೆನಿಗಳು ಕಳೆದ ವಾರದ ಅವಧಿಯಲ್ಲಿ ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ 5.168 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದ್ದು,ಅದರಲ್ಲಿ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಹೆಚ್ಚಿನ ನಷ್ಟ ಅನುಭವಿಸಿದೆ ಎಂದು ಮೂಲಗಳು ತಿಳಿಸಿವೆ.ನಾಲ್ಕು ಖಾಸಗಿ ಕ್ಷೇತ್ರದ ಕಂಪೆನಿಗಳು ಹಾಗೂ ಆರು ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳು ಜೂನ್ 12ಕ್ಕೆ ವಾರಂತ್ಯಗೊಂಡಂತೆ ಮಾರುಕಟ್ಟೆಯ ಒಟ್ಟು ಮೌಲ್ಯದಲ್ಲಿ 16,83,045 ಕೋಟಿ ರೂ.ನಷ್ಟವಾಗಿದೆ. ಆದರೆ ಹಿಂದಿನ ವಾರದ ವಹಿವಾಟಿನಲ್ಲಿ 16,88,213 ಕೋಟಿ ರೂಪಾಯಿಗಳ ನಷ್ಟವಾಗಿತ್ತು. ಒಎನ್‌ಜಿಸಿ ಮಾರುಕಟ್ಟೆಯ ಶೇರುಗಳು ಶುಕ್ರವಾರದ ಶೇರುಪೇಟೆಯ ವಹಿವಾಟಿನಲ್ಲಿ ಶೇ.4.56 ರಷ್ಟು ಇಳಿಕೆ ಕಂಡಿದ್ದರಿಂದ 11,518 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿ 2,41,008 ಕೋಟಿ ರೂಪಾಯಿಗಳಿಗೆ ತಲುಪಿದೆ. ಪ್ರಮುಖ 10 ಕಂಪೆನಿಗಳಲ್ಲಿ ಬಿಎಸ್‌ಇ ಸೂಚ್ಯಂಕ ಹೊಂದಿರುವ ಐದು ಕಂಪೆನಿಗಳಾದ, ಒಎನ್‌ಜಿಸಿ ,ಮಿನರಲ್ಸ್ ಆಂಡ್ ಮೆಟಲ್ಸ್ ಟ್ರೆಡಿಂಗ್ ಕಾರ್ಪೋರೇಶನ್ , ನ್ಯಾಷನಲ್ ಮೈನಿಂಗ್ ಡೆವಲೆಪ್‌ಮೆಂಟ್ ಕಾರ್ಪೋರೇಶನ್ ,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಕಂಪೆನಿಗಳು ಕಳೆದ ವಾರದಲ್ಲಿ ನಷ್ಟ ಅನುಭವಿಸಿವೆ. ಏತನ್ಮಧ್ಯೆ, ಇನ್ನಿತರ ಐದು ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ , ನ್ಯಾಷನಲ್ ಧರ್ಮಲ್ ಪವರ್ ಕಾರ್ಪೋರೇಶನ್ , ಭಾರ್ತಿ ಏರ್‌ಟೆಲ್ ಇನ್ಫೋಸಿಸ್ ಟೆಕ್ನಾಲಾಜೀಸ್ ಮತ್ತು ಲಾರ್ಸನ್ ಆಂಡ್ ಟೌಬ್ರೋ ಕಂಪೆನಿಗಳ ಮಾರುಕಟ್ಟೆ ಮೌಲ್ಯಗಳಲ್ಲಿ ಏರಿಕೆಯಾಗಿವೆ.ದೇಶದ ಪ್ರತಿಷ್ಠಿತ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ , ಕಳೆದ ವಾರ 3,70,913 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯ ಹೊಂದಿದ್ದ ರಿಲಯನ್ಸ್, ಕಳೆದ ವಾರದಲ್ಲಿ 22,812 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಕ್ರೂಢೀಕರಿಸಿಕೊಂಡು ಲಾಭದಾಯಕ ಕಂಪೆನಿಯಾಗಿ ಹೊರಹೊಮ್ಮಿದೆ.. ಎನ್‌ಟಿಪಿಸಿಗೆ 1,113 ಕೋಟಿ ರೂಪಾಯಿಗಳ ಲಾಭವಾಗಿದ್ದು, ಹಿಂದಿನ ವಾರದಲ್ಲಿ 2,41,008 ಕೋಟಿ ರೂಪಾಯಿಗಳಿಗೆ ತಲುಪಿದ್ದ ಒಎನ್‌ಜಿಸಿ, 11,518 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. |