ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಆಳವಾಗಿ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಅಧ್ಯಕ್ಷ ಸ್ಟ್ರಾಸ್ ಖಾನ್ ಹೇಳಿದ್ದಾರೆ.ಜಾಗತಿಕ ಆರ್ಥಿಕ ಕುಸಿತ ನಿಧಾನವಾಗಿ ಚೇತರಿಸಿಕೊಳ್ಳುವ ಸಂಕೇತಗಳನ್ನು ತೋರಿಸುತ್ತಿದ್ದು, ಆರ್ಥಿಕ ಬಿಕ್ಕಟ್ಟನಿಂದ ಹೊರಬರುವ ಪ್ರಯತ್ನಗಳನ್ನು ಆಯಾ ರಾಷ್ಟ್ರಗಳು ಶೀಘ್ರದಲ್ಲಿ ಆರಂಭಿಸಬೇಕಿದೆ ಎಂದು ಎಂಟು ರಾಷ್ಟ್ರಗಳ ಹಣಕಾಸು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಕಝಕಿಸ್ತಾನಕ್ಕೆ ಭೇಟಿ ನೀಡಿದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಅಧ್ಯಕ್ಷ ಸ್ಟ್ರಾಸ್ ಖಾನ್ ಮಾತನಾಡಿ ,ಜಗತ್ತಿನ ಎಲ್ಲ ರಾಷ್ಟ್ರಗಳು ಆರ್ಥಿಕ ಕುಸಿತ ತಡೆಗೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ. ಜಿ 8 ಗುಂಪಿನ ರಾಷ್ಟ್ರಗಳು ಎಚ್ಚರಿಕೆವಹಿಸದಿದ್ದಲ್ಲಿ ಆರ್ಥಿಕ ಚೇತರಿಕೆಯ ಸಂಕೇತಗಳು ಕಂಡುಬರುತ್ತಿರಲಿಲ್ಲ . ಬೃಹತ್ ಜಾಗತಿಕ ಆರ್ಥಿಕ ಕುಸಿತ ಮುಂಬರುವ ದಿನಗಳಲ್ಲಿ ಎದುರಾಗುವ ಸಾಧ್ಯತೆಗಳಿವೆ ಎನ್ನುವುದನ್ನು ಇತರ ರಾಷ್ಟ್ರಗಳು ಮರೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. |