ದೇಶಿಯ ಶೇರುಪೇಟೆಯ ಕುಸಿತದ ನಿರೀಕ್ಷೆಯಲ್ಲಿ ಬ್ಯಾಂಕ್‌ಗಳು ಡಾಲರ್‌ಗಳ ಖರೀದಿಯಲ್ಲಿ ತೊಡಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 21 ಪೈಸೆ ಕುಸಿತ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್‌ಗೆ 47.70/72 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 21 ಪೈಸೆ ಕುಸಿತ ಕಂಡು 47.91 ರೂಪಾಯಿಗಳಿಗೆ ತಲುಪಿದೆ.ಏಷ್ಯಾ ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.ಏತನ್ಮಧ್ಯೆ, ಏಷ್ಯಾ ಮಾರುಕಟ್ಟೆಗಳು ಆರಂಭಿಕ ವಹಿವಾಟಿನಲ್ಲಿ ಶೇ.3 ರಷ್ಟು ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ಮುಂಬೈ ಶೇರುಪೇಟೆಯ ಬಿಎಸ್‌ಇ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಶೇ.2.38 ರಷ್ಟು ಕುಸಿತ ಕಂಡು 14,875.52 ಅಂಕಗಳಿಗೆ ತಲುಪಿತ್ತು. |