ಭಾರತದ ಕಾರು ಪ್ರಿಯರಿಗೆ ಮಾರುತಿ ಅಲ್ಟೋ ಕಾರು ಖರೀದಿಸುವ ಕನಸು ಕನಸಾಗಿಯೇ ಉಳಿದಿದೆ. ಆದರೆ ಅದಕ್ಕೆ ಕಾರಣ ದರ ಏರಿಕೆ. ಮಾರುತಿ ಅಲ್ಟೋ ಕಾರಿನ ದರವನ್ನು ಕಂಪೆನಿ ಉತ್ಪಾದಕ ವೆಚ್ಚವನ್ನು ಆಧರಿಸಿ ಅಂದಾಜು 2 ಲಕ್ಷದವರೆಗೆ ನಿಗದಿಪಡಿಸಿತ್ತು. ಆದರೆ ಕನಸುಗಳು ಸುಲಭವಾಗಿ ನನಸಾಗುವುದಿಲ್ಲ.ಮಾರುತಿ ಕಂಪೆನಿಯ ಪ್ರಕಾರ , ಕಾರಿನ ಒಟ್ಟು ದರದ ಶೇ.2 ರಷ್ಟು ಕೇಂದ್ರ ಮಾರಾಟ ತೆರಿಗೆ, ಹಾಗೂ ಶೇ.8 ರಷ್ಟು ಅಬಖಾರಿ ತೆರಿಗೆ ಸೇರಿದಂತೆ ಒಟ್ಟು 15,800 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಕಾರು ಶೋರೂಂನಿಂದ ಮಾರಾಟವಾದರೂ ಗ್ರಾಹಕ ಶೇ.10 ರಷ್ಟು ಅಥವಾ ವ್ಯಾಟ್ ತೆರಿಗೆ 20 ಸಾವಿರ ರೂಪಾಯಿಗಳನ್ನು ಭರಿಸಬೇಕಾಗುತ್ತದೆ. ಕಾರಿನ ದರ ಹೆಚ್ಚಾದಂತೆ ಅಬಕಾರಿ ತೆರಿಗೆ ಕೂಡಾ ಹೆಚ್ಚಾಗುತ್ತದೆ. ಕಳೆದ ಎರಡು ಬಜೆಟ್‌ಗಳಲ್ಲಿ ಕೇಂದ್ರ ಸರಕಾರ ಸಣ್ಣ ಕಾರುಗಳ ಮೇಲಿನ ಅಬಕಾರಿ ತೆರಿಗೆಯನ್ನು ರದ್ದುಗೊಳಿಸಿ ಐಶಾರಾಮಿ ಕಾರುಗಳ ಅಬಕಾರಿ ತೆರಿಗೆಯಲ್ಲಿ ಬದಲಾವಣೆ ಮಾಡದಿರುವುದರಿಂದ ಗ್ರಾಹಕರು ಹೆಚ್ಚಿನ ತೆರಿಗೆಯನ್ನು ಭರಿಸುವುದು ಅನಿವಾರ್ಯ.ಆದ್ದರಿಂದ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಮುಂಬರುವ ಬಜೆಟ್‌ನಲ್ಲಿ ಮತ್ತಷ್ಟು ತೆರಿಗೆಗಳನ್ನು ಕಡಿತಗೊಳಿಸಿ ಕಾರು ಪ್ರಿಯರಿಗೆ ಕಾರುಗಳನ್ನು ಖರೀದಿಸಲು ಅನುಕೂಲ ಮಾಡಿಕೊಡುತ್ತಾರೆಯೇ ಎನ್ನುವುದು ಮುಖ್ಯ ಪ್ರಶ್ನೆ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕುಸಿದ ಕೈಗಾರಿಕೋದ್ಯಮದ ಚೇತರಿಕೆಗಾಗಿ ಸರಕಾರ ಡಿಸೆಂಬರ್ 2008ರಲ್ಲಿ ಉತ್ತೇಜನ ಪ್ಯಾಕೇಜ್ ,ತೆರಿಗೆ ದರ ಕಡಿತ ಆರಂಭಿಸಿದಂತೆ ಅದನ್ನು ಮುಂದುವರಿಸಿಕೊಂಡು ಹೋಗುವದು ಒಳ್ಳೆಯದು ಎನ್ನುವುದು ಉದ್ಯಮ ತಜ್ಞರು ಅಭಿಪ್ರಾಯ. ಈ ಮೊದಲು ಅಬಕಾರಿ ತೆರಿಗೆಯನ್ನು ಶೇ.10 ರಿಂದ ಶೇ.8ಕ್ಕೆ ಕಡಿತ ಮಾಡಿದ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮ ಶೇ.10 ರಷ್ಟು ಚೇತರಿಕೆ ಕಂಡಿತ್ತು. ಕೇಂದ್ರ ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ, ಕೇಂದ್ರ ಮಾರಾಟ ತೆರಿಗೆಯನ್ನು ಶೇ.1 ರಷ್ಟು, ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿರುವ ಅಬಕಾರಿ ತೆರಿಗೆ ವಿನಾಯತಿಯನ್ನು ಮಾರ್ಚ್ 2013ರ ವರೆಗೆ ವಿಸ್ತರಣೆ ಮಾಡುವ ನಿರೀಕ್ಷೆಯನ್ನು ಉದ್ಯಮಗಳು ಬಜೆಟ್‌ನಲ್ಲಿ ನಿರೀಕ್ಷಿಸಿದ್ದಾರೆ ಎಂದು ಮಾರುತಿ ಉದ್ಯೋಗ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಖಾತ್ತರ್ ಹೇಳಿದ್ದಾರೆ. ಕಾರನ್ನು ಖರೀದಿಸದಿರುವುದಕ್ಕೆ ಕೇವಲ ದರ ಏರಿಕೆ ಕಾರಣವಲ್ಲ. ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ,ರಿವರ್ಸ್ ರೆಪೊ ದರಗಳನ್ನು ಕಡಿತಗೊಳಿಸಿ ಬ್ಯಾಂಕ್‌ಗಳಿಗೆ ಮೂರು ಬಾರಿ ಬಡ್ಡಿ ದರ ಕಡಿತಗೊಳಿಸುವುಂತೆ ಸಂಕೇತ ನೀಡಿತ್ತು. ಆದರೆ ಬ್ಯಾಂಕ್‌ಗಳು ಬಡ್ಡಿ ದರವನ್ನು ಕಡಿತಗೊಳಿಸದೆ ಇರುವುದು ಕೂಡಾ ಗ್ರಾಹಕರ ಕಾರು ಖರೀದಿಯ ಕನಸನ್ನು ಪೇಚಿಗೆ ಸಿಲುಕಿಸಿದೆ. |