ಜಾಗತಿಕ ಖ್ಯಾತಿಯ ಮೊಬೈಲ್ ತಯಾರಿಕೆ ಕಂಪೆನಿ ಆಪಲ್ , ಇತ್ತೀಚೆಗೆ ಬಿಡುಗಡೆ ಮಾಡಲು ಉದ್ದೇಶಿಸಿದ್ದ ಐಫೋನ್ ಮಾರುಕಟ್ಟೆಗೆ ಬರುವ ಮುಂಚೆ ಮಾರಾಟವಾಗಿ ಜನಪ್ರಿಯತೆಯಲ್ಲಿ ದಾಖಲೆ ಸ್ಥಾಪಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಕಂಪೆನಿ ಗ್ರಾಹಕರಿಗಾಗಿ ಅಂತರ್ಜಾಲದ ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಸೌಲಭ್ಯ ಒದಗಿಸಿದ ಹಿನ್ನೆಲೆಯಲ್ಲಿ ಬೇಡಿಕೆ ಸಲ್ಲಿಸಿದ ಗ್ರಾಹಕರಿಗೆ ಐಫೋನ್‌ಗಳನ್ನು ವಿತರಿಸಲಾಗಿದ್ದು , ಇತ್ತೀಚೆಗೆ ಬೇಡಿಕೆ ಸಲ್ಲಿಸಿರುವ ಗ್ರಾಹಕರು ಜನಪ್ರಿಯ ಮೊಬೈಲ್ ಪಡೆಯಲು ಒಂದು ಅಥವಾ ಎರಡು ವಾರಗಳ ಅವಧಿಗೆ ನಿರೀಕ್ಷಿಸಬೇಕಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಆಪಲ್ ಕಂಪೆನಿ , ವೇಗದ ,ಬೃಹತ್ ಸಾಮರ್ಥ್ಯದ , ಹೆಚ್ಚಿನ ಸಂಗ್ರಹ ಸೌಲಭ್ಯವಿರುವ ಐಫೋನ್ ( 3ಜಿಎಸ್) 16 ಜಿಬಿ ಹ್ಯಾಂಡ್‌ಸೆಟ್ 199 ಡಾಲರ್‌ಗಳಿಗೆ ಹಾಗೂ 32ಜಿಬಿ ಸಾಮರ್ಥ್ಯದ ಐಫೋನ್ 299 ಡಾಲರ್‌ಗಳಂತೆ ದರವನ್ನು ನಿಗದಿಪಡಿಸಿತ್ತು.ಕಂಪೆನಿ ಐಫೋನ್‌ಗಳನ್ನು ಜೂನ್ 8 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿ, ಗ್ರಾಹಕರು ಆನ್‌ಲೈನ್ ಮೂಲಕ ಎರಡು ವರ್ಷಗಳ ಕರಾರಿನೊಂದಿಗೆ ಮುಂಗಡ ಬೇಡಿಕೆಗಳನ್ನು ಸಲ್ಲಿಸುವಂತೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ , ಆಪಲ್ ಕಂಪೆನಿ ಇಲ್ಲಿಯವರೆಗೆ ಎಷ್ಟು ಐಫೋನ್ 3ಜಿಎಸ್ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎನ್ನುವ ಕುರಿತಂತೆ ವಿವರಗಳನ್ನು ಬಹಿರಂಗಪಡಿಸಿಲ್ಲ |