ಟ್ವೆಂಟಿ20 ವಿಶ್ವಕಪ್‌ನಿಂದ ಹೊರಬರುವುದರೊಂದಿಗೆ ಮಹೇಂದ್ರ್ ಸಿಂಗ್ ಧೋನಿ ಹಾಗೂ ಅವರ ತಂಡಕ್ಕೆ ವಿಶ್ರಾಂತಿ ದೊರೆತಂತಾಗಿದೆ. ಆದರೆ ವೀಕ್ಷಕರ ಸಂಖ್ಯೆಯಲ್ಲಿ ಇಳಿಮುಖವಾಗಬಹುದು ಎನ್ನುವ ಆತಂಕ ಜಾಹೀರಾತುದಾರರನ್ನು ಕಾಡುತ್ತಿದೆ. ಆದರೆ ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್ ಮಾತ್ರ ಸಂಪೂರ್ಣ ಪಂದ್ಯಾವಳಿಯನ್ನು ಕಂತಿನಲ್ಲಿ ಮಾರಾಟ ಮಾಡಿ ನೆಮ್ಮದಿಯನ್ನು ಅನುಭವಿಸುತ್ತಿದೆ.
ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಭಾರತ ನಿರ್ಗಮಿಸುವುದರೊಂದಿಗೆ ರೇಟಿಂಗ್ಸ್‌ನಲ್ಲಿ ಏರುಪೇರಾಗಬಹುದಾಗಿದೆ. ಆದರೆ ವಾಣಿಜ್ಯ ಒಪ್ಪಂದದಂತೆ ಜಾಹೀರಾತು ಅವಧಿಯನ್ನು ಕಂತಿನಲ್ಲಿ ಮಾರಾಟ ಮಾಡಲಾಗಿದೆ ಎಂದು ಇಎಸ್‌ಪಿಎನ್ ಸಾಫ್ಟ್‌ವೇರ್ ವ್ಯವಸ್ಥಾಪಕ ನಿರ್ದೇಶಕ ಆರ್.ಸಿ ವೆಂಕಟೇಶ್ ಹೇಳಿದ್ದಾರೆ.
ಪ್ರತಿ 10 ಸೆಕೆಂಡ್‌ಗಳಿಗೆ 2.7 ಲಕ್ಷ ರೂಪಾಯಿಗಳಿಂದ 4 ಲಕ್ಷ ರೂಪಾಯಿಗಳವರೆಗಿನ ದರದ ಜಾಹೀರಾತು ಒಪ್ಪಂದಗಳನ್ನು ಪಂದ್ಯಾವಳಿ ಆರಂಭವಾಗುವುದಕ್ಕಿಂತ ಮೂರು ವಾರಗಳ ಹಿಂದೆ ಮುಕ್ತಾಯಗೊಳಿಸಲಾಗಿದೆ. ಕೆಲವು ಸೆಕೆಂಡ್‌ಗಳು ಮಾತ್ರ ಬಾಕಿ ಉಳಿದಿವೆ ೆಂದು ತಿಳಿಸಿದ್ದಾರೆ.
ಕಳೆದ ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್ ,ರಿಲಯನ್ಸ್ ಮೊಬೈಲ್ ,ಹೀರೋ ಹೊಂಡಾ, ಪೆಪ್ಸಿ ಕಂಪೆನಿ ಹೆವ್‌ಲೆಟ್ -ಪ್ಯಾಕರ್ಡ್ , ಮಾರುತಿ , ನೋಕಿಯಾ ವೀಸಾ ಎಲ್‌ಜಿ ಎಲೆಕ್ಟ್ರಾನಿಕ್ಸ್ ಮತ್ತು ನ್ಯೂಯಾರ್ಕ್ ಲೈಫ್ ಇನ್‌ಸ್ಯೂರೆನ್ಸ್ ಕಂಪೆನಿಗಳಿಗೆ ಜಾಹೀರಾತುದಾರರಿಗೆ ಶೇ.20-25ರಷ್ಟು ಮಾಸಿಕ ಕಂತುಗಳಲ್ಲಿ ಪಾವತಿಸಿದ್ದು, ಚಾನೆಲ್‌ಗಳಿಗೆ ತಲಾ ಸುಮಾರು 180 ಕೋಟಿ ರೂಪಾಯಿಗಳ ಲಾಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಟ್ವೆಂಟಿ20 ವಿಶ್ವಕಪ್‌ನಲ್ಲಿ ಬಾರತ ತಂಡ ನಿರ್ಗಮಿಸುವುದರೊಂದಿಗೆ ವೀಕ್ಷಕರ ಸಂಖ್ಯೆಯಲ್ಲಿ ಕುಸಿತವಾಗಬಹುದು. ಆದರೆ ನಾವು ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮುಂಬರುವ 2015 ವರೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಗ್‌ಟಿವಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಬೆಲ್ ಹೇಳಿದ್ದಾರೆ.
ಮಾರುತಿ ಸುಝುಕಿ ಕಂಪೆನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಮಯಾಂಕ್ ಪರೇಖ್ ಮಾತನಾಡಿ , ಭಾರತ ತಂಡ ಟ್ವೆಂಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ವರೆಗಾದರೂ ಕನಿಷ್ಠ ತಲುಪುವ ನಿರೀಕ್ಷೆಯಿತ್ತು. ಆದರೆ ತಂಡ ವಿಶ್ವಕಪ್‌ನಿಂದ ನಿರ್ಗಮಿಸುವುದರೊಂದಿಗೆ ಜಾಹೀರಾತುದಾರರು ಹಣ ಹೂಡಿಕೆ ಮಾಡಿರುವುದರಿಂದ ರೇಟಿಂಗ್ಸ್‌ನಲ್ಲಿ ಇಳಿಮುಖವಾದಲ್ಲಿ ಆತಂಕ ಸಹಜ ಎಂದು ತಿಳಿಸಿದ್ದಾರೆ. |