ಜಾಗತಿಕ ಮೂರನೇ ಬೃಹತ್ ಮೊಬೈಲ್ ತಯಾರಿಕೆ ಸಂಸ್ಥೆಯಾದ ಎಲ್‌ಜಿ ಎಲೆಕ್ಟ್ರಾನಿಕ್ಸ್ ವರ್ಷಾಂತ್ಯಕ್ಕೆ 50 ನೂತನ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಶೇ.11 ರಷ್ಟು ವಹಿವಾಟಿನ ಗುರಿಯನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ದ್ವಿಗುಣವಾಗಿದೆ. ಮುಂಬರುವ ಡಿಸೆಂಬರ್ ಅಂತ್ಯಕ್ಕೆ ನೂತನ 50 ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಶೇ.11 ರಷ್ಟು ಷೇರುಪಾಲನ್ನು ಹೊಂದುವ ಗುರಿಯಿದೆ ಎಂದು ಕಂಪೆನಿಯ (ಏಷ್ಯಾ-ಫೆಸಿಫಿಕ್ ) ಮುಖ್ಯಸ್ಥ ಬೊ.ಹ.ಚೊಯಿ ತಿಳಿಸಿದ್ದಾರೆ. ಪ್ರಸ್ತುತ ದಕ್ಷಿಣ ಕೊರಿಯಾ ಮೂಲದ ಎಲ್‌ಜಿ ಎಲೆಕ್ಟ್ರಾನಿಕ್ಸ್ ಕಂಪೆನಿ ದೇಶದ ಜಿಎಸ್‌ಎಂ ಕ್ಷೇತ್ರದ ಮಾರುಕಟ್ಟೆಯಲ್ಲಿ ಶೇ.ರಷ್ಟು ಪಾಲನ್ನು ಹೊಂದಿದ್ದು, ಸಿಡಿಎಂಎ ಕ್ಷೇತ್ರದಲ್ಲಿ ಶೇ.50 ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿದೆ. ಕಮ್ಯೂನಿಕ್ ಏಷ್ಯಾ 2009 ಸಮಾರಂಭದಲ್ಲಿ ಕ್ರಿಸ್ಟಲ್ ಜಿಎಂ730 ಮತ್ತು ವಿವ್‌ಟಿ ಸ್ಮಾರ್ಟ್ ನೂತನ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಚೊಯಿ ಮಾತನಾಡುತ್ತಿದ್ದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರ್ಥಿಕತೆ ಕುಸಿತ ಕಾಣುತ್ತಿರುವುದರಿಂದ, ಎಲ್‌ಜಿ ಕಂಪೆನಿ ಭಾರತವನ್ನು ಮಹತ್ವದ ಹೂಡಿಕೆ ರಾಷ್ಟ್ರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.ಜಾಗತಿಕ ಮೊಬೈಲ್ ಮಾರಾಟದ ಕಂಪೆನಿಗಳಲ್ಲಿ ನೋಕಿಯಾ ,ಸಾಮ್‌ಸುಂಗ್ ನಂತರದ ಸ್ಥಾನವನ್ನು ಎಲ್‌ಜಿಎಲೆಕ್ಟ್ರಾನಿಕ್ಸ್ ಪಡೆದಿದ್ದು, ಮೊಟರೊಲಾ ಮತ್ತು ಸೋನಿ ಎರಿಕ್ಸನ್ ಕಂಪೆನಿಗಳನ್ನು ಹಿಂದಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದೆ.ಭಾರತದಲ್ಲಿ ಮೊಬೈಲ್ ಫೋನ್‌ಗಳ ಬೇಡಿಕೆಯಲ್ಲಿ ಏರಿಕೆಯಾಗುತ್ತಿದ್ದು,ಭಾರತದ ಗ್ರಾಹಕರರು ಬಯಸಿದಂತೆ ಡಿಸೈನ್ , ಬಣ್ಣ ಮತ್ತು ಅತ್ಯಾಧುನಿಕ ಮಾಡೆಲ್‌ಗಳ ಮೊಬೈಲ್‌ಗಳ ತಯಾರಿಕೆಗೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಚೊಯಿ ಹೇಳಿದ್ದಾರೆ. |