ದೇಶದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ,ದೇಶಿಯ ಹಾರಾಟದ ಮೇಲೆ ಇಂಧನ ತೆರಿಗೆ ಶುಲ್ಕದಲ್ಲಿ 400 ರೂಪಾಯಿ ಹೆಚ್ಚಳ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರಯಾಣ ದರದಲ್ಲಿ 400 ರೂಪಾಯಿಗಳ ಏರಿಕೆಯಾಗಿದೆ. ಮಾರ್ಚ್ ತಿಂಗಳ ಅವಧಿಯಲ್ಲಿ ವೈಮಾನಿಕ ಇಂಧನ ದರ ಶೇ33 ರಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಇಂಧನ ತೆರಿಗೆ ಶುಲ್ಕದಲ್ಲಿ 400 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಜೆಟ್ ಏರ್‌ವೇಸ್‌ನ ವಕ್ತಾರರು ತಿಳಿಸಿದ್ದಾರೆ. ಇಂಧನ ದರ ಏರಿಕೆ ಶುಲ್ಕ ಜೆಟ್ ಏರ್‌ವೇಸ್ ,ಜೆಟ್‌ಲೈಟ್ ಜೆಟ್‌ಏರ್‌ವೇಸ್ ಕೊನೆಕ್ಟ್‌ನ ಎಲ್ಲ ವಿಮಾನಗಳಿಗೆ ಅನ್ವಯಿಸುತ್ತದೆ ಎಂದು ವಕ್ತಾರರು ಹೇಳಿದ್ದಾರೆ. ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಜೂನ್ 15 ರಂದು ಎಟಿಎಫ್ ಇಂಧನ ದರದಲ್ಲಿ ಶೇ.12 ರಷ್ಟು ಏರಿಕೆ ಮಾಡಿದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಇಂಧನ ತೆರಿಗೆ ಶುಲ್ಕದಲ್ಲಿ ಹೆಚ್ಚಳ ಮಾಡಿವೆ. ಕಿಂಗ್‌ಫಿಶರ್ ಸ್ಪೈಸ್ ಜೆಟ್ ಇಂಡಿಗೋ ಮತ್ತು ಗೋಏರ್ ವಿಮಾನಯಾನ ಸಂಸ್ಥೆಗಳು ಜೆಟ್‌ಏರ್‌ವೇಸ್ ಪ್ರಯಾಣ ದರ ಏರಿಕೆ ಮಾಡಿದಂತೆ , ದರದಲ್ಲಿ ಹೆಚ್ಚಳ ಘೋಷಿಸಿವೆ ಎಂದು ಮೂಲಗಳು ತಿಳಿಸಿವೆ. |