ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ಗ್ರಾಹಕ ಸ್ನೇಹಿಯಾಗಿ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದ್ದು, ಗ್ರಾಹಕರ ಹಣ ವರ್ಗಾವಣೆ ಕುರಿತಂತೆ ಗ್ರಾಹಕರಿಗೆ ಮಾಹಿತಿ ನೀಡಲು ಬ್ಯಾಂಕ್‌ಗಳು ಎಸ್‌ಎಂಎಸ್ ಅಥವಾ ಇ-ಮೇಲ್ ಮುಖಾಂತರ ಕಳುಹಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ. ಆದಾಗ್ಯೂ , ಈಗಾಗಲೇ ಹಲವು ಬ್ಯಾಂಕ್‌ಗಳು ಡೆಬಿಟ್ ಮತ್ತು ಕ್ರೆಡಿಟ್ ಖಾತೆಗಳಲ್ಲಿನ ಹಣ ವರ್ಗಾವಣೆ ಬಗ್ಗೆ ಗ್ರಾಹಕರಿಗೆ ಎಸ್‌ಎಂಎಸ್ ಅಥವಾ ಇ-ಮೇಲ್ ಮುಖಾಂತರ ಮಾಹಿತಿಯನ್ನು ರವಾನಿಸುತ್ತಿವೆ. ಆದರೆ ಎಲ್ಲ ಬ್ಯಾಂಕ್‌ಗಳು ಈ ನಿಯಮವನ್ನು ಅಳವಡಿಸಿಕೊಳ್ಳಬೇಕು ಎಂದು ಆರ್‌ಬಿಐ ಸಲಹೆ ನೀಡಿದೆ. ರಿಯಲ್ ಟೈಮ್ ಗ್ರಾಸ್ ಸೆಟ್ಲ್‌ಮೆಂಟ್( ಆರ್‌ಟಿಜಿಎಸ್ ) ವ್ಯವಸ್ಥೆ ಗ್ರಾಹಕ ಸ್ನೇಹಿಯಾಗಲು ಹಣ ವರ್ಗಾವಣೆಯಾದ ಕೂಡಲೇ ಗ್ರಾಹಕರಿಗೆ ಎಸ್‌ಎಂಎಸ್ ಅಥವಾ ಇ-ಮೇಲ್ ಮುಖಾಂತರ ಮಾಹಿತಿಯನ್ನು ರವಾನಿಸಿದಲ್ಲಿ ಬ್ಯಾಂಕ್‌ಗಳ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಮೂಡುತ್ತದೆ ಎಂದು ಸೆಂಟ್ರಲ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಆರ್‌ಟಿಜಿಎಸ್ ಡೆಬಿಟ್ ಅಥವಾ ಕ್ರೆಡಿಟ್ ಖಾತೆಗಳ ಬಗ್ಗೆ ವಿವರಗಳನ್ನು ಪಡೆಯಲು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಗ್ರಾಹಕರಿಗೆ ಸೂಕ್ತ ಮಾಹಿತಿಯನ್ನು ಎಸ್‌ಎಂಎಸ್ ಅಥವಾ ಇ-ಮೇಲ್ ಮುಖಾಂತರ ರವಾನಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ. |