ಭಾರತೀಯ ಕಂಪೆನಿಗಳು 2010ರ ಮೊದಲ ತ್ರೈಮಾಸಿಕ ಅವಧಿಗಾಗಿ 23 ಸಾವಿರ ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿವೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.9ರ ಗಡಿಯನ್ನು ತಲುಪಿದ್ದಾಗ ಕಂಪೆನಿಗಳು ತೆರಿಗೆಯನ್ನು ಪಾವತಿಸಿದಂತೆ, ಆರ್ಥಿಕ ಕುಸಿತ ಮಧ್ಯೆಯು 2009-10ರ ಮೊದಲ ತ್ರೈಮಾಸಿಕ ಅವಧಿಯಲ್ಲಿ, ಕಂಪೆನಿಗಳು ಮುಂಗಡವಾಗಿ ತೆರಿಗೆ ಪಾವತಿಸಿರುವುದು ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.. ಬ್ಯಾಂಕಿಂಗ್ , ಗ್ರಾಹಕ ವಸ್ತುಗಳ ಕಂಪೆನಿಗಳು ಮತ್ತು ವಾಹನೋದ್ಯಮ ಸಂಸ್ಥೆಗಳು ಹೆಚ್ಚಿನ ತೆರಿಗೆಯನ್ನು ಪಾವತಿಸಿದ್ದು, ರಿಯಲ್ ಎಸ್ಟೇಟ್ ಸೇರಿದಂತೆ ಕೆಲ ಕ್ಷೇತ್ರಗಳ ಕಂಪೆನಿಗಳು ತೆರಿಗೆ ಪಾವತಿಯಲ್ಲಿ ಹಿನ್ನೆಡೆ ಅನುಭವಿಸಿವೆ ಎಂದು ಹೇಳಿದ್ದಾರೆ.ಕಂಪೆನಿಗಳು ಕಾರ್ಪೋರೇಟ್ ತೆರಿಗೆಯ ಮೊದಲ ಕಂತನ್ನು ಜೂನ್ 15ರೊಳಗೆ ಪಾವತಿಸುವುದು ಅಗತ್ಯವಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. |