ಏರ್ ಇಂಡಿಯಾ ಅಡಳಿತ ಮಂಡಳಿ, ಸಿಬ್ಬಂದಿಗಳಿಗೆ 15 ದಿನಗಳ ವಿಳಂಬದ ನಂತರ ವೇತನ ಪಾವತಿಸುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೆ , ಹದಿನೈದು ದಿನಗಳಿಗಿಂತ ಹೆಚ್ಚಿನ ಅವಧಿಗೆ ವಿಳಂಬವಾದಲ್ಲಿ ಸಂಸ್ಥೆಯ 24 ಸಾವಿರ ಸಿಬ್ಬಂದಿ ಜೂನ್ 30 ರಂದು ಸಾಮೂಹಿಕ ಮುಷ್ಕರದಲ್ಲಿ ತೊಡಗುವುದಾಗಿ ಬೆದರಿಕೆ ಒಡ್ಡಿದ್ದರಿಂದ ವಿಮಾನ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆಗಳಿವೆ. ಏರ್‌ಕಾರ್ಪೋರೇಶನ್ ಎಂಪ್ಲಾಯಿಸ್ ಯುನಿಯನ್ (ಎಸಿಇಯು ) ಏವಿಯೆಶನ್ ಇಂಡಸ್ಟ್ರೀ ಎಂಪ್ಲಾಯಿಸ್ ಗಿಲ್ಡ್(ಎಐಇಜಿ ) ಮತ್ತು ಇಂಡಿಯನ್ ಎರ್‌ಕ್ರಾಫ್ಟ್ ಟೆಕ್‌ನಿಸಿಯನ್ಸ್ ಅಸೋಸಿಯೇಶನ್ ಸಂಘಟನೆಗಳ ಸದಸ್ಯ ಸಿಬ್ಬಂದಿಗಳು ಜೂನ್ 30 ರೊಳಗೆ ಏರ್‌ಇಂಡಿಯಾ ಅಡಳಿತ ಮಂಡಳಿ ವೇತನ ನೀಡಲು ವಿಫಲವಾದಲ್ಲಿ ವೇತನವಿಲ್ಲದೇ ಕೆಲಸವಿಲ್ಲ ಎನ್ನುವ ನೀತಿಯಡಿ ಜಂಟಿಯಾಗಿ ಜೂನ್ 30 ರಂದು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಏರ್‌ಕಾರ್ಪೋರೇಶನ್ ಎಂಪ್ಲಾಯಿಸ್ ಯುನಿಯನ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜೆ.ಬಿ. ಕಡಿಯಾನ್ ತಿಳಿಸಿದ್ದಾರೆ. ಏರ್ ಇಂಡಿಯಾ ಅಡಳಿತ ಮಂಡಳಿ ಜುಲೈ 15 ರಂದು ನೀಡಲಾಗುವ ವೇತನವನ್ನು ಜುಲೈ 30 ಕ್ಕೆ ನೀಡುವ ನಿರ್ಧಾರ ತಳೆದಿದ್ದರಿಂದ ಕಾರ್ಮಿಕ ವಿರೋಧಿ , ಕಂಪೆನಿ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಿದಂತಾಗಿದೆ. ಜುಲೈ 30 ರಂದು ಏರ್ ಇಂಡಿಯಾದ ಸಂಪೂರ್ಣ ಸಿಬ್ಬಂಧಿ ಮುಷ್ಕರದಲ್ಲಿ ಭಾಗವಹಿಸಲಿರುವುದರಿಂದ ಯಾವುದೇ ವಿಮಾನ ಸಂಚಾರವಿರುವುದಿಲ್ಲ ಎಂದು ಹೇಳಿದ್ದಾರೆ. ಬ್ರಿಟಿಷ್ ಏರ್‌ವೇಸ್, ತನ್ನ ಸಿಬ್ಬಂದಿಗಳಿಗೆ ಜುಲೈ ವೇತನ ಪಡೆಯದಿರುವಂತೆ ಆದೇಶ ನೀಡಿದ ವರದಿಗಳ ಹಿನ್ನೆಲೆಯಲ್ಲಿ ಏರ್‌ಇಂಡಿಯಾ ಸಿಬ್ಬಂದಿ ಕೂಡಾ ಮುಷ್ಕರಕ್ಕೆ ಮೊರೆಹೋಗಿವೆ. ಆದಾಗ್ಯೂ , ಏರ್ ಇಂಡಿಯಾ ಅಡಳಿತ ಮಂಡಳಿ ಕಳೆದ ವಾರ ನೋಟಿಸ್ ಹೊರಡಿಸಿ, ಸಿಬ್ಬಂದಿಗಳ ಜೂನ್ ತಿಂಗಳ ವೇತನವನ್ನು ಜುಲೈ 15ಕ್ಕೆ ನೀಡುವುದಾಗಿ ಘೋಷಿಸಿತ್ತು. |