ತನಿಖಾ ಸಂಸ್ಥೆಗಳಿಗೆ ಮೊಬೈಲ್ ಗ್ರಾಹಕರ ಸುಳಿವು ನೀಡುವ ಐಎಂಇಐ ಸಂಖ್ಯೆಯಿಲ್ಲದ ಮೊಬೈಲ್‌ಗಳ ಅಮುದು ನಿಷೇಧ ಇಂದಿನಿಂದ ಜಾರಿಗೆ ಬರಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ ಇಂಟರ್‌ನ್ಯಾಷನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ಹೊಂದಿರದ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಶೂನ್ಯ ಐಎಂಇಐ ಸಂಖ್ಯೆಗಳನ್ನು ಹೊಂದಿದ ಮೊಬೈಲ್‌ಗಳ ಅಮುದನ್ನು ನಿಷೇಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಪ್ರಧಾನ ನಿರ್ದೇಶಕರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಐಎಂಇಐ 15 ಸಂಖ್ಯೆಗಳ ಕೋಡ್ ಹೊಂದಿದ್ದು, ಮೊಬೈಲ್ ಗ್ರಾಹಕ ಇತರರಿಗೆ ಕರೆ ಮಾಡಿದಾಗ ಆಪರೇಟರ್ ನೆಟ್‌ವರ್ಕ್‌ನಲ್ಲಿ ಐಎಂಇಐ ಸಂಖ್ಯೆ ದಾಖಲಾಗುತ್ತದೆ. ಕಳೆದ ವರ್ಷ ನವೆಂಬರ್ ತಿಂಗಳ ಅವಧಿಯಲ್ಲಿ ಮುಂಬೈಯಲ್ಲಿ ಉಗ್ರರು ದಾಳಿ ನಡೆಸಿದಾಗ ಐಎಂಇಐ ಸಂಖ್ಯೆಯಿರದ ಮೊಬೈಲ್‌ಗಳನ್ನು ಬಳಸಿದ್ದರಿಂದ ಭಧ್ರತಾ ಕಳವಳ ಮೂಡಿಸಿತ್ತು. ಆದ್ದರಿಂದ ಐಎಂಇಐ ಸಂಖ್ಯೆ ಹೊಂದಿರದ ಮೊಬೈಲ್‌ಗಳನ್ನು ನಿಷೇಧಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಜಿಎಸ್‌ಎಂ ಸೇವೆಯನ್ನು ನೀಡುವ ಕಂಪೆನಿಗಳು ಈಗಾಗಲೇ ಐಎಂಇಐ ಸಂಖ್ಯೆಯನ್ನು ಹೊಂದಿರದ ಮೊಬೈಲ್ ಹ್ಯಾಂಡ್‌ಸೆಟ್‌ಗಳಿಗೆ ಸಂಪರ್ಕ ನೀಡುವುದಿಲ್ಲವೆಂದು ಹೇಳಿಕೆ ನೀಡಿವೆ. ರಾಷ್ಟ್ರೀಯ ಭಧ್ರತೆಗೆ ಬೆದರಿಕೆಯ ಹಿನ್ನೆಲೆಯಲ್ಲಿ ಖಾಸಗಿ ಟೆಲಿಕಾಂ ಕ್ಷೇತ್ರಗಳ ಆಪರೇಟರ್‌ಗಳು ಐಎಂಇಐ ಸಂಖ್ಯೆಯನ್ನು ಹೊಂದಿರದ ಮೊಬೈಲ್‌ಗಳಿಗೆ ಒದಗಿಸುವ ಸೇವೆಯನ್ನು ಸ್ಥಗಿತಗೊಳಿಸುವಂತೆ ಟೆಲಿಕಾಂ ಇಲಾಖೆ ಈಗಾಗಲೇ ಆದೇಶಿಸಿದೆ. |