ಇಂಗ್ಲೆಂಡ್‌ನಲ್ಲಿ 2008-09ರ ಅವಧಿಯಲ್ಲಿ 108 ಯೋಜನೆಗಳಿಗೆ ವಿದೇಶಿ ಬಂಡವಾಳ ಹೂಡುವುದರೊಂದಿಗೆ ಭಾರತ ಎರಡನೇ ಬೃಹತ್ ಹೂಡಿಕೆ ರಾಷ್ಟ್ರವಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷದ ಅವಧಿಯಲ್ಲಿ 75 ಯೋಜನೆಗಳಿಗೆ ವಿದೇಶಿ ಬಂಡವಾಳ ಹೂಡುವುದರೊಂದಿಗೆ ಭಾರತ ಆರನೇ ಸ್ಥಾನವನ್ನು ಪಡೆದಿತ್ತು ಎಂದು ಬ್ರಿಟನ್ ವ್ಯಾಪಾರ ಮತ್ತು ಹೂಡಿಕೆ ಖಾತೆ ಸಚಿವ ಲಾರ್ಡ್ ಡೇವಿಸ್ ಹೇಳಿದ್ದಾರೆ.ಜಿಟಿಎಲ್ ಕಮ್ಯೂನಿಕೇಶನ್ಸ್ ,ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ವರ್ಜಿನ್ ರೇಡಿಯೊದೊಂದಿಗೆ ಮಾಡಿಕೊಂಡ ಒಪ್ಪಂದ , ವಿಜ್ಞಾನ, ಇಂಜಿನಿಯರಿಂಗ್ ಮತ್ತು ಡೈನಾಮೆಟಿಕ್ಸ್ ಕ್ಷೇತ್ರದ ಹೂಡಿಕೆಗಳು ಸೇರ್ಪಡೆಯಾಗಿವೆ. ಇಂಗ್ಲೆಂಡ್‌ನಲ್ಲಿ 1,744 ಹೂಡಿಕೆ ಯೋಜನೆಗಳು ಕಾರ್ಯಾರಂಭವಾಗಿದ್ದು ಸುಮಾರು 53 ರಾಷ್ಟ್ರಗಳು ಹೂಡಿಕೆ ಮಾಡಿವೆ.ಭಾರತದ ಹೂಡಿಕೆಯಲ್ಲಿ ಶೇ.44ರಷ್ಟು ಏರಿಕೆಯಾಗುವುದರೊಂದಿಗೆ 108 ಯೋಜನೆಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.ಅಮೆರಿಕ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು,ಪ್ರಸಕ್ತ ವರ್ಷದಲ್ಲಿ ಶೇ.30 ರಷ್ಟು ಹೂಡಿಕೆಯಲ್ಲಿ ಹೆಚ್ಚಳವಾಗುವುದರೊಂದಿಗೆ 621 ಯೋಜನೆಗಳಿಗೆ ಹೂಡಿಕೆ ಮಾಡಿ ನಂಬರ್ ಒನ್ ಸ್ಥಾನದಲ್ಲಿದೆ. ಇಟಲಿ ಹೂಡಿಕೆಯಲ್ಲಿ ಶೇ.45ರಷ್ಟು ಏರಿಕೆಯಾಗಿದೆ. ಫ್ರಾನ್ಸ್ ಕೆನಡಾ ಗಲ್ಫ್ ರಾಷ್ಟ್ರಗಳು ಕ್ರಮವಾಗಿ ಶೇ.15 , ಶೇ.25 ಶೇ.25 ರಷ್ಟು ಹೂಡಿಕೆಯಲ್ಲಿ ಏರಿಕೆಯಾಗಿದೆ.ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್ ಹವಾಕ್ ವಿಮಾನಗಳ ತಯಾರಿಕೆಯಲ್ಲಿ ಇಂಗ್ಲೆಂಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹಲವಾರು ಭಾರತೀಯ ಕಂಪೆನಿಗಳು ಇಂಗ್ಲೆಂಡ್‌ನಲ್ಲಿ ಹೂಡಿಕೆಗೆ ಆಸಕ್ತಿಯನ್ನು ಹೊಂದಿವೆ ಎಂದು ಸಚಿವ ಲಾರ್ಡ್ ಡೇವಿಸ್ ತಿಳಿಸಿದ್ದಾರೆ. |