30 ವರ್ಷಗಳ ಅವಧಿಯಲ್ಲಿ , ಪ್ರಥಮ ಬಾರಿಗೆ ಸಗಟು ಸೂಚ್ಯಂಕ ದರ ಜೂನ್ 6ಕ್ಕೆ ವಾರಂತ್ಯಗೊಂಡಂತೆ ಮೈನಸ್ ಶೇ.1.61 ರಷ್ಟು ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ. 1977-78 ರ ನಂತರ ಪ್ರಥಮ ಬಾರಿಗೆ ಜೂನ್ 6ಕ್ಕೆ ವಾರಂತ್ಯಗೊಂಡಂತೆ ಮೈನಸ್ ಶೇ.1.6 ರಷ್ಟು ಕುಸಿತ ಕಂಡು ಋಣಾತ್ಮಕದತ್ತ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರ್ಷಿಕ ಹಣದುಬ್ಬರ ದರ, ಮೇ ತಿಂಗಳ 30ಕ್ಕೆ ವಾರಂತ್ಯಗೊಂಡಂತೆ ಶೇ.0.13 ರಷ್ಟಾಗಿತ್ತು.ಆದರೆ ಜೂನ್ 6ಕ್ಕೆ ವಾರಂತ್ಯಗೊಂಡಂತೆ ಶೇ.- 1.61 ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಜೂನ್ ತಿಂಗಳ ಮೊದಲ ವಾರದಲ್ಲಿ ಹಣದುಬ್ಬರ ದರ ಶೇ.11.66 ರಷ್ಟಾಗಿತ್ತು. |